ಬೆಂಗಳೂರ : ಯಾರು ಕುಂಬಳಕಾಯಿ ಕಳ್ಳರೋ, ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲ ನಿರ್ಧಾರವನ್ನು ಮಂಡ್ಯದಲ್ಲಿಯೇ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದೇನೆ. ಅದೇ ರೀತಿ ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ಹೇಳ್ತಿನಿ. ಯಾರು ಕುಂಬಳಕಾಯಿ ಕಳ್ಳರೋ, ಕಳ್ಳರೋ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಾನ್ಯಾಕೆ ಅದನ್ನು ಈಗ ಹೇಳಬೇಕು. ನನ್ನ ಅವಶ್ಯಕತೆ ಅವರಿಗೆ ಇಲ್ಲ ಎಂದು ಹೇಳಿದ್ದಾರೆ.
ನನಗೂ ಯಾರ ಅವಶ್ಯಕತೆಯೂ ಇಲ್ಲ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಇನ್ನೂ ಅಭಿಮಾನಿಗಳ ಸಭೆಯಲ್ಲಿ ಮೂರ್ನಾಲ್ಕು ರೀತಿಯ ಅಭಿಪ್ರಾಯ ಬಂದಿದೀನಿ. ಅದೆಲ್ಲವನ್ನೂ ನಾನು ಮಂಡ್ಯದ ಸಭೆಯಲ್ಲಿ ಹೇಳುತ್ತೇನೆ. ಎಚ್‌ಡಿ ಕುಮಾರಸ್ವಾಮಿ ಅವರು ಭೇಟಿಯಾಗಿರುವುದು ಸೇರಿ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧರಿಸ್ತೀನಿ. ಈ ಸಭೆಗೆ ದರ್ಶನ್ ಹಾಗೂ ಅಭಿಷೇಕ್ ಸಭೆಗೆ ಬರುತ್ತಾರೆ ಎಂದು ಹೇಳಿದರು.
ಯಾರು ಕಳ್ಳರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ: ಡಿಕೆಶಿ ಟಾಂಗ್ ನೀಡಿದ ಸುಮಲತಾ
Date: