ಚಿಕ್ಕಬಳ್ಳಾಪುರ ಜನರಿಗೆ ಭಾನುವಾರ ಮುಂಜಾನೆ ಫುಲ್ ಶಾಕ್..! ಅಂಗಡಿ, ರಸ್ತೆಯಲ್ಲೆಲ್ಲಾ ಯುವಕರ ದಂಡು ನೋಡಿ ಇಡಿ ವಠಾರವೇ ಕುತೂಹಲದದಿಂದ ನೋಡ್ತಾ ಇದ್ರು. ಅರೇ ನಮ್ಮ ಏರಿಯಾ ಹುಡುಗರು ರೇಷನ್ ತಗೋಳೋಕೆ ಇಷ್ಟೊಂದು ದೊಡ್ಡ ಕ್ಯೂ ಮಾಡಿದಾರಾ..? ಅನ್ನೋ ಪ್ರಶ್ನೆ ಕೆಲವರದ್ದು.. ಇನ್ನೂ ಕೆಲವು ಹುಡುಗರಂತೂ ಆಧಾರ್ ಕಾರ್ಡ್ ಇಡ್ಕೊಂಡು ಕ್ಯೂನಲ್ಲಿ ನಿಂತಿರೋದನ್ನ ನೋಡಿದ ಜನರು ಪಾಪ ಹುಡುಗ್ರು ಜಾಬ್‍ಗೆ ಅಪ್ಲಿಕೇಷನ್ ಹಾಕ್ತಾ ಇದಾರೇನೋ ಅನ್ಕೊಂಡಿದ್ರು.. ಅಕ್ಕ ಪಕ್ಕದ ಮಳಿಗೆಯ ಮುಂದೆಯಂತೂ ಜನರೋ ಜನ. ನೂಕು ನುಗ್ಗಲು ಮಧ್ಯೆ ತನ್ನ ಬಲ ಪ್ರಯೋಗ ಮಾಡಿ ಹಾಗೋ ಹೀಗೋ ಮುಂದೆ ಸಾಗ್ತಾ ಇದ್ದ ಯುವಕರ ದಂಡು.. ಇಷ್ಟೆಲ್ಲಾ ರಿಸ್ಕ್ ಯಾಕೆ ಗೊತ್ತಾ..? ಫ್ರೀ ಜಿಯೋ ಸಿಮ್‍ಗಾಗಿ..!
ಹೌದು.. ಚಿಕ್ಕಬಳ್ಳಾಪುರ ಸುತ್ತಮುತ್ತಲ ರಿಲಯಾನ್ಸ್ ಮಳಿಗೆಗಳಲ್ಲಿ ಯುವಕರ ದಂಡೆ ಬಂದು ಸೇರ್ತಾ ಇದೆ. ಫ್ರೀ ಸಿಮ್‍ಗಾಗಿ ನಾ ಮುಂದು ತಾ ಮುಂದು ಅಂತ ಹರಸಾಹಸ ಮಾಡ್ತಾ ಜಿಯೋ ಸಿಮ್ ಕೊಂಡ್ಕೊಳ್ಳೋಕೆ ತುದಿಗಾಲಲ್ಲಿ ನಿಂತಿದ್ದಾರೆ ನೋಡಿ. ತಮ್ಮ ವಾಹನಗಳನ್ನು ಎಲ್ಲಿ ಬೇಕೋ ಅಲ್ಲಿ ನಿಲ್ಲಿಸಿಕೊಂಡು ರಸ್ತೆಯಲ್ಲೇ ಕ್ಯೂನಿಂತು ಟ್ರಾಫಿಕ್ ಜಾಮ್ ಮಾಡಿದ್ದ ಯುವಕರನ್ನು ನಿಯಂತ್ರಿಸೋಕೆ ಪೊಲೀಸರಿಗಂತೂ ಸಾಕು ಸಾಕಾಗಿ ಹೋಗಿದೆ. ಅದೂ ಉಚಿತ ಸಿಮ್‍ಗಾಗಿ ಈ ಹರ ಸಾಹಸ ನೋಡಿ.
ದೇಶದಾದ್ಯಂತ ಜಿಯೋ ಸಿಮ್ ಹವಾ ಸಖತ್ತಾಗೆ ನಡಿತಾ ಇರೋದು ನಿಮಗೆಲ್ಲಾ ಗೊತ್ತಿರೋದೆ. ಆದ್ರೆ ಟ್ರಾಫಿಕ್ ಜಾಮ್ ಮಾಡಿ ಜಿಯೋ ಸಿಮ್ ತಗೋಳ್ತಾ ಇರೋ ಯುವಕರನ್ನ ಏನಂತಾ ಹೇಳ್ಬೇಕು..? ನಗರದಲ್ಲಿ ಜಿಯೋ ಸಿಮ್ ಮಳಿಗೆ ಆರಂಭವಾಗಿದ್ದೇ ತಡ ಥಿಯೇಟರ್‍ನಲ್ಲಿ ಹೊಸ ಸಿನಿಮಾ ರಿಲೀಸ್‍ಗೂ ಅಷ್ಟೊಂದು ಜನ ಬರೊಲ್ವೇನೋ..! ಆದ್ರೆ ಜಿಯೋ ಸಿಮ್ ಕೊಳ್ಕೊಳಕ್ಕಂತೂ ಯುವಕರ ದಂಡೇ ಕ್ಯೂನಲ್ಲಿ ಕಾಯ್ತಾ ಇದಾರೆ ನೋಡಿ..!
ಇನ್ನು ಅಕ್ಕ ಪಕ್ಕದ ಅಂಗಡಿಗಳಿಗೆ ಈ ಯುವಕರ ಆರ್ಭಟ ತಡೆಯಲಾರದೇ ತಮ್ಮ ವ್ಯಾಪಾರಕ್ಕೆ ಅಡ್ಡಿ ಪಡಿಸುತ್ತಿರೋ ಹಿನ್ನಲೆಯಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಯುವಕರ ಗುಂಪನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಯುವಕರ ಸಂಖ್ಯೆ ಜಾಸ್ತಿಯಾಗುತ್ತಲೇ ಪೊಲೀಸರಿಗೆ ಸಾಕು ಸಾಕಾಗಿ ಹೋಗಿದೆ. ಈ ಹಿನ್ನಲೆಯಲ್ಲಿ ಯುವಕರಿಗೆ ಸ್ವಲ್ಪ ಲಾಠಿ ರುಚಿಯನ್ನೂ ತೋರ್ಸಿದ್ದಾರೆ.
ಇನ್ನು ನಗರಕ್ಕೆ ಜಿಯೋ ಸಿಮ್ ಬಂದರೋ ಸುದ್ದಿಯನ್ನು ಯುವಕರು ಕ್ಯೂನಲ್ಲಿ ನಿಂತುಕೊಂಡೆ ಅವರವರ ಸ್ನೇಹಿತರಿಗರ ಸಂದೇಶ ಕಳುಸ್ತಾ ಇದ್ದದ್ದು ಅಲ್ಲಿ ವಿಶೇಷವಾಗಿತ್ತು. ಇನ್ನು ಪೊಲೀಸರ ಲಾಠಿ ರುಚಿ ನೋಡಿದ ಯುವಕರು ಆನಂತರ ಶಿಸ್ತಿನ ಸಿಪಾಯಿಗಳಾಗಿದ್ದು ಗಮನಕ್ಕೆ ಬಂದವು.
ನಗರಕ್ಕೆ ಸುಮಾರು 1500 ಜಿಯೋ ಸಿಮ್‍ಗಳು ಬಂದಿದ್ದು ಎಲ್ಲರಿಗೂ ಸಿಮ್ ಸಿಗುತ್ತೆ ನೂಕು ನುಗ್ಗಲು ಮಾಡಬೇಡಿ ಒಂದು ಸಿಮ್ ಆಕ್ಟಿವೇಶನ್ ಆಗೋಕೆ ಹತ್ತು ನಿಮಿಷನಾದ್ರೂ ಹಿಡಿಯತ್ತೆ ದಯವಿಟ್ಟು ಸಹರಿಸಿ ಎಂದು ಜಿಯೋ ಮಾರಾಟಗಾರರು ಮನವಿ ಮಾಡಿಕೊಂಡರೂ ಸಹ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗಲೇ ಇಲ್ಲ.
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!