ವರ್ಷದ ತೊಡಕು ರಾತ್ರಿಯೇ ಡೆಡ್ಲಿ ಅಟ್ಯಾಕ್: ಹಳೆ ದ್ವೇಷಕ್ಕೆ ವ್ಯಕ್ತಿಗೆ ಚಾಕು ಇರಿದ ಕಿಡಿಗೇಡಿಗಳು!

Date:

ಆನೇಕಲ್:- ವರ್ಷದ ತೊಡಕು ರಾತ್ರಿ ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ. ರಾಜಧಾನಿ ಬೆಂಗಳೂರಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಸಂದ್ರದಲ್ಲಿ ನಿನ್ನೆ ರಾತ್ರಿ 10:30 ರ ಸುಮಾರಿಗೆ ಘಟನೆ ಜರುಗಿದೆ

ಮುತ್ತಾನಲ್ಲೂರು ವಾಸಿ ಸತೀಶ್(30) ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ. ಮುತ್ತಾನಲ್ಲೂರು ವಾಸಿಗಳಾದ ಮುನಿಯಲ್ಲಪ್ಪ, ದರ್ಶನ್ ಪ್ರಶಾಂತ್, ಆನಂದ್ , ಅಶೋಕ್ ಮತ್ತು ವೈಟ್ ಫೀಲ್ಡ್ ಮೂರ್ತಿ ಅಂಡ್ ಗ್ಯಾಂಗ್ ನಿಂದ ಕೃತ್ಯ ನಡೆದಿದೆ. ನಿನ್ನೆ ಮಧ್ಯಾಹ್ನ ಸತೀಶ್ ಜೊತೆ ಮುನಿಯಲ್ಲಪ್ಪ ಕಿರಿಕ್ ತೆಗೆದಿದ್ದ. ಸಂಜೆ ಹೊತ್ತಿಗೆ ಅಗಿದ್ದು ಆಗೋಯ್ತು ರಾಜಿಗೆ ಬಾ ಎಂದು ಕರೆದಿದ್ದಾನೆ.

ರಾತ್ರಿ ಮಾತನಾಡಬೇಕು ಅಂತಾ ಕರೆಸಿ ಸತೀಶ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ತಲೆ, ಕಣ್ಣು, ಹೊಟ್ಟೆ, ಬೆನ್ನು, ಕೈ ಹತ್ತಾರು ಡ್ರಾಗರ್ ಮತ್ತು ಚಾಕುವಿನಿಂದ ಇರಿಯಲಾಗಿದ್ದು, ಜೊತೆಯಲ್ಲಿದ್ದ ಸತೀಶ್ ಮಗನ ಮೇಲೂ ಹಲ್ಲೆ ನಡೆದಿದೆ.

ರಾತ್ರಿ ಬೇಡವೆಂದರೂ ಒತ್ತಾಯ ಮಾಡಿ ಸತೀಶ್ ನನ್ನು ಮುನಿಯಲ್ಲಪ್ಪ ಕರೆದೊಯ್ದಿದ್ದ. ಆತಂಕಗೊಂಡ ಮನೆಯವರು ಮಗನನ್ನು ಸತೀಶ್ ಜೊತೆ ಕಳುಹಿಸಿದ್ದರು. ಪ್ಲಾನ್ ನಂತೆ ಸತೀಶ್ ಗಾಗಿ ಗ್ಯಾಂಗ್ನಿಂದ ಅಟ್ಯಾಕ್ ಗಾಗಿ ಕುಳಿತಿತ್ತು. ಈ ವೇಳೆ ಸತೀಶ್ ನೆರವಿಗೆ ಧಾವಿಸಿದ ಮಗನ ಹೊಡೆದು
ಗ್ಯಾಂಗ್ ಓಡಿಸಿದೆ. ಬಳಿಕ ಸತೀಶ್ ಮೇಲೆ ಡ್ರಾಗರ್ ಮತ್ತು ಚಾಕುವಿನಿಂದ ಸಿಕ್ಕಸಿಕ್ಕಲ್ಲಿ ಗ್ಯಾಂಗ್ ಚುಚ್ಚಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸತೀಶ್ ಜೀವನ್ಮರದ ನಡುವೆ ಹೋರಾಟ ಮಾಡುತ್ತಿದ್ದು, ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...