ಲಕ್ನೋ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ನೆರವೇರಿಸಿದರು. 2024 ರ ಲೋಕಸಭಾ ಚುನಾವಣೆಗೆ 11:40 ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುಂಚಿತವಾಗಿ ಅವರು ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ‘ಹರ್ ಹರ್ ಮಹಾದೇವ್’ ಘೋಷಣೆಯ ನಡುವೆ ಗಂಗಾ ಪೂಜೆಯನ್ನು ಪೂರ್ಣಗೊಳಿಸಿದರು.
ವೇದ ಮಂತ್ರಗಳ ಪಠಣದ ಜೊತೆಗೆ ಮೋದಿ ದಶಾಶ್ವಮೇಧ್ ಘಾಟ್‌ನಲ್ಲಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು. ಇಂದು ಗಂಗಾ ಸಪ್ತಮಿ, ಈ ದಿನ ಗಂಗಾ ಮಾತೆಗೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಜ್ಯೋತಿಷಿ ಪಂಡಿತ್ ರಿಷಿ ದ್ವಿವೇದಿ ಹೇಳಿದ್ದಾರೆ. ಅದರಂತೆ ಪ್ರಧಾನಿಯವರು ಇಂದು ಗಂಗಾರತಿ ಬೆಳಗಿದ್ದಾರೆ.
ದಶಾಶ್ವಮೇಧ ಘಾಟ್ʼನಲ್ಲಿ ಗಂಗಾ ಆರತಿ ನೆರವೇರಿಸಿದ ಪ್ರಧಾನಿ
Date:






