ಬೆಂಗಳೂರು: ಸಾಲು ಸಾಲು ಅತ್ಯಾಚಾರಗಳ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ಫೈನಲೀ ಅರೆಸ್ಟ್ ಆಗಿದ್ದಾರೆ.ಇಂದಿನಿಂದ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆಯನ್ನು ಎಸ್‌ಐಟಿ ನಡೆಸಲಿದೆ. ಮೊದಲು ವೈದ್ಯಕೀಯ ತಪಾಸಣೆ ನಡೆಸುತ್ತಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೊಳಪಡಿಸಲು ಕಸ್ಟಡಿಗೆ ನೀಡುವಂತೆ ಕೋರ್ಟ್ ಗೆ ಎಸ್‌ಐಟಿ ಮನವಿ ಮಾಡಲಿದೆ. ಇದರೊಂದಿಗೆ ಎಸ್‌ಐಟಿ ತನಿಖೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಜೊತೆಗೆ 3 ಕೇಸ್ ಗೆ ಸಂಬಂಧಿಸಿದಂತೆ ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಯುತ್ತೆ.
ಮೂರು ಪ್ರಕರಣಗಳ ಸಂಬಂಧ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಶ್ಲೀಲ ವಿಡಿಯೋ ಚಿತ್ರೀಕರಣ, ವೈರಲ್ ಆಗಿದ್ದು, ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ನಿಮ್ಮದೇನಾ? ನಿಮ್ಮ ಮೊಬೈಲ್ ಫೋನ್ ಯಾರಾದರೂ ತೆಗೆದುಕೊಂಡಿದ್ದರೆ? ದೇಶ ಬಿಟ್ಟ ದಿನದಿಂದ ವಾಪಸ್ ಬರುವವರೆಗೂ ಯಾರು ನೆರವಾಗಿದ್ದರು ಎಂಬುದರ ಬಗ್ಗೆ ಪ್ರಜ್ವಲ್ ವಿಚಾರಣೆ ನಡೆಸಿ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳಲಿದ್ದಾರೆ. ವಿದೇಶಕ್ಕೆ ಹೋಗಲು ಮತ್ತು ವಾಪಸ್ ಬರಲು, ಇಷ್ಟು ದಿನ ಇರಲು ನೆರವಾದವರು ಯಾರು ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.