No menu items!
3.8 C
Munich
Wednesday, May 13, 2026

ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ..!

Must read

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ತಡ ರಾತ್ರಿ ದಾಳಿ ನಡೆಸಿದ್ದಾರೆ. ಕಾನೂನು ಬಾಹಿರವಾಗಿ ಹಣವನ್ನ ಬಾಜಿ ಕಟ್ಟಿ ಪೋಕರ್ ಆಟ ಆಡಿಸುತ್ತಿದ್ದ ಮಾಹಿತಿ ಮೇರೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಗೋಲ್ಡನ್ ‌ಏಸ್ ಪೋಕರ್ ರೂಮ್ ಹೆಸರನಲ್ಲಿ ಮುಕೇಶ್ ಚಾವ್ಲ ಎಂಬಾತ ಪೋಕರ್ ಗೇಮ್ ನಡೆಸುತ್ತಿದ್ದ. ಕೋರಮಂಗಲದ 80ಅಡಿ ರಸ್ತೆಯಲ್ಲಿ ಗೇಮಿಂಗ್ ಶಾಪ್ ಓಪನ್ ಮಾಡಿದ್ದ ಮುಕೇಶ್ ಚಾವ್ಲ ರಾತ್ರಿ ಪೂರ ಪೋಕರ್ ಆಟ ಆಡಿಸುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನೂ ಮುಕೇಶ್ ಈ ಹಿಂದೆ ದೇವನಹಳ್ಳಿ ಬಳಿ ಪೋಕರ್ ಅಡ್ಡೆ ನಡೆಸಿ ಸಿಸಿಬಿ ಪೊಲೀಸ್ರ ಕೈಗೆ ಲಾಕ್ ಆಗಿದ್ದ. ಇದಾದ ನಂತರ ಕೋರಮಂಗಲದಲ್ಲಿ ಪೋಕರ್ ಗೇಮ್ ಓಪನ್ ಮಾಡಿದ್ದ ಎಂದು ತಿಳಿದು ಬಂದಿದೆ. ತಡ ರಾತ್ರಿ ಸಿಸಿಬಿ ಸಂಘಟಿತ ಅಪರಾಧ ದಳ ಅಧಿಕಾರಿಗಳು ದಾಳಿ ನಡೆಸಿ ಆಟದಲ್ಲಿ ತೊಡಹಿದ್ದವರನ್ನ ವಶಕ್ಕೆ ಪಡೆದು ಪೋಕರ್ ಗೇಮ್ ಬಳಸುವ ವಸ್ತುಗಳು ಹಾಗೂ ಆಟಕ್ಕೆ ಬಾಜಿ ಕಟ್ಟಿದ್ದ ಲಕ್ಷಾಂತರ ಹಣವನ್ನ ಸೀಜ್ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article