ಚಿತ್ರದುರ್ಗ: ನಟ ದರ್ಶನ್ ಅವರು ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಕೇಸ್ನಲ್ಲಿ ಅವರನ್ನು ಬಂಧಿಸಲಾಗಿದೆ. ಪವಿತ್ರಾ ಗೌಡ ಅವರು ಎ1 ಆರೋಪಿ ಎನಿಸಿಕೊಂಡರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಸದ್ಯ ಅವರನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದರ ಮದ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ-ಚಾಲಕ ರವಿ ಚಿತ್ರದುರ್ಗ ಪೊಲೀಸರ ಮುಂದೆ ಶರಣಾಗಿದ್ದಾನೆ. ಬಾಡಿಗೆಗೆ ಅಂತ ಹೇಳಿ ಆರೋಪಿ ಜಗ್ಗ ಮತ್ತು ರಘು ಕರೆಸಿಕೊಂಡಿದ್ದರು. ದರ್ಶನ್ ಭೇಟಿಗೆಂದು ಹೇಳಿ ರೇಣುಕಾಸ್ವಾಮಿ ಕರೆದುಕೊಂಡು ಬಂದಿದ್ದರು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದ ಎಂದು ರವಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರಿಗೆ ಶರಣಾಗಿರುವ ರವಿ, ತನಗೆ ಈ ಘಟನೆ ಬಗ್ಗೆ ಏನೇನು ತಿಳಿದಿಲ್ಲ. ನಾಲ್ವರು ಟೂರ್ ಮಾದರಿಯಲ್ಲಿ ಬಂದಿದ್ದರು. ಬಾಡಿಗೆ ಹಣಕ್ಕಾಗಿ ಬೆಂಗಳೂರಿಗೆ ಹೋಗಲು ಒಪ್ಪಿಕೊಂಡಿದ್ದೆ. ಬೆಂಗಳೂರಿಗೆ ಹೋಗುತ್ತಿದ್ದಂತೆ ಶೆಡ್ ಒಳಗೆ ಕಾರು ನಿಲ್ಲಿಸಲು ಹೇಳಿದರು. ಅವರನ್ನ ಒಳಗೆ ಬಿಟ್ಟು ತಾನು ಹೊರಗೆ ಬಂದೆ. ಅಲ್ಲಿ ಏನಾಗಿದೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ. ಟ್ಯಾಕ್ಸಿ ನಿಲ್ದಾಣದ ಮುಖಂಡರು, ಬಾಡಿಗೆ ಮಾತನಾಡುವಾಗ ಇದ್ದವರು, ರವಿಯನ್ನ ಪೊಲೀಸರ ಮುಂದೆ ಶರಣಾಗು, ಶಿಕ್ಷೆ ಕಡಿಮೆಯಾಗುತ್ತದೆ ಮನವೊಲಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ
ಚಿತ್ರದುರ್ಗದ ಡಿವೈಎಸ್ಪಿ ಎದುರು ಶರಣಾದ ರೇಣುಕಾಸ್ವಾಮಿ ಕೊಲೆಯ 8ನೇ ಆರೋಪಿ ರವಿ
Date: