ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಇಂದು ಮನೆ ಮಹಜರು ನಡೆಸಿದ್ದಾರೆ. ರೇಣುಕಾಸ್ವಾಮಿಯ ಮೇಲೆ ಮೊದಲು ಹಲ್ಲೆ ಮಾಡಿದ್ದೇ ಪವಿತ್ರಾ ಗೌಡ ಎಂಬ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
ಆರ್.ಆರ್.ನಗರದಲ್ಲಿರುವ ಪವಿತ್ರಾ ಗೌಡ ಮನೆಗೆ ಆಕೆ ಮತ್ತು ಅವರ ಆಪ್ತ ಪವನ್ ಎಂಬವರನ್ನು ಕರೆದೊಯ್ಯಲಾಗಿದ್ದು, ಕೃತ್ಯದ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ಹಲ್ಲೆ ಮಾಡಲು ಬಳಸಿದ್ದ ಚಪ್ಪಲಿಯನ್ನ ಜಪ್ತಿ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಮತ್ತೊಬ್ಬ ಆರೋಪಿ ಪೊಲೀಸರ ವಶವಾಗಿದ್ದಾನೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 16ಜನ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಕೊಲೆ ಕೇಸ್ ನಲ್ಲಿ ಮತ್ತೊಬ್ಬನನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ರಸ್ತೆಯಲ್ಲಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ದಿನ ಅಂದರೆ ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದೆ.