ರಾಮಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ರಾವಣನ ಪಾತ್ರ ಕೂಡ ಪ್ರಮುಖವಾದುದಾಗಿದೆ. ರಾಮಾಯಣದಲ್ಲಿ ರಾವಣನನ್ನು ಬಹಳ ಕೆಟ್ಟ ರಾಕ್ಷಸನೆಂಬಂತೆ ಚಿತ್ರಿಸಿರಬಹುದು. ಆದರೆ, ಆತ ಬಹಳ ಗೌರವ ಹೊಂದಿದ ಬ್ರಾಹ್ಮಣ ಜ್ಞಾನಿ. ಅಷ್ಟೇ ಅಲ್ಲ ಬಹಳ ಉತ್ತಮ ಆಡಳಿತ ನೀಡುತ್ತಿದ್ದ ರಾಜ ಕೂಡ ಹೌದು. ಇನ್ನೂ ರಾವಣನ ಪಾಂಡಿತ್ಯ ಹೇಗಿತ್ತು!? ಹಿಂದಿನ ಜನ್ಮದಲ್ಲಿ ರಾವಣ ಯಾರು..? ಎಂಬೆಲ್ಲಾ ರಾಮಾಯಣದ ರಾವಣನ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ತಿಳಿಯೋಣ ಬನ್ನಿ.
ರಾಮಾಯಣದಲ್ಲಿ ರಾವಣನನ್ನು ಬಹಳ ಕೆಟ್ಟ ರಾಕ್ಷಸನೆಂಬಂತೆ ಚಿತ್ರಿಸಿರಬಹುದು. ಆದರೆ, ಆತ ಬಹಳ ಗೌರವ ಹೊಂದಿದ ಬ್ರಾಹ್ಮಣ ಜ್ಞಾನಿ ಆಗಿದ್ದ. ಬಹಳ ಉತ್ತಮ ಆಡಳಿತ ನೀಡುತ್ತಿದ್ದ ರಾಜ, ಅತ್ಯುತ್ತಮ ವೀಣಾ ವಾದಕ, ಶಿವನ ಮಹಾಭಕ್ತ. ಲಂಕಾಧಿಪತಿ ರಾವಣನು ಮುನಿ ವಿಶ್ರವ ಮತ್ತು ರಾಕ್ಷಸ ರಾಣಿ ಕೈಕೇಶಿಯ ಮಗನಾಗಿದ್ದನು. ಆದ್ದರಿಂದ ಅವನು ಅರ್ಧ ಬ್ರಾಹ್ಮಣ ಹಾಗೂ ಇನ್ನರ್ಧ ರಾಕ್ಷಸನಾಗಿದ್ದನು. ರಾವಣನ ಅಜ್ಜನ ಹೆಸರು ಪ್ರಜಾಪತಿ ಪುಲಸ್ತ್ಯ. ಪುಲಸ್ತ್ಯರು ಬ್ರಹ್ಮ ದೇವರ ಹತ್ತು ಪುತ್ರರಲ್ಲಿ ಒಬ್ಬರಾಗಿದ್ದರು. ಈ ರೀತಿಯಾಗಿ ರಾವಣನು ಬ್ರಹ್ಮನ ಮೊಮ್ಮಗನಾಗಿ ಜನಿಸಬೇಕಾಯಿತು.
ರಾವಣನ ಹೆಂಡತಿಯ ಬಗ್ಗೆ ಹೇಳಿದಾಗೆಲ್ಲಾ ಕೇವಲ ಮಂಡೋದರಿಯ ಬಗ್ಗೆ ಮಾತ್ರ ಉಲ್ಲೇಖ ಮಾಡಿರುವುದನ್ನು ನಾವು ನೋಡಬಹುದು. ಆದರೆ ರಾವಣನಿಗೆ ಇನ್ನೂ ಇಬ್ಬರು ಹೆಂಡತಿಯರು ಇದ್ದರು ಎನ್ನುವುದರ ಉಲ್ಲೇಖ ತುಂಬಾ ಕಡಿಮೆ. ರಾವಣನ ಮೂರು ಹೆಂಡತಿಯರಲ್ಲಿ ಮೊದಲನೇ ಹೆಂಡತಿ ಮಂಡೋದರಿ, ಎರಡನೇ ಹೆಂಡತಿಯ ಹೆಸರು ದಮ್ಯಮಾಲಿನೀ ಮತ್ತು ಮೂರನೇ ಹೆಂಡತಿಯ ಹೆಸರನ್ನು ಎಲ್ಲಿಯೂ ಕೂಡ ಉಲ್ಲೇಖಿಸಲಾಗಿಲ್ಲ. ಅದೇ ಸಮಯದಲ್ಲಿ, ಈ ಮೂರು ರಾಣಿಗಳಿಂದ ಅವನಿಗೆ 7 ಗಂಡು ಮಕ್ಕಳಿದ್ದರು. ರಾವಣನು ಓರ್ವ ಮಹಾನ್ ಸಂಗೀತಗಾರನಾಗಿದ್ದನು ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದನೆಂಬ ನಂಬಿಕೆಯಿದೆ. ರಾವಣನ ಜ್ಞಾನದ ಕುರಿತಿರುವ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಶಿವನನ್ನು ಸ್ತುತಿಸುವ ಸತ್ಯಮೂಲ್ಯ ಕೃತಿ ಎಂದು ಪರಿಗಣಿಸಲಾಗುವ ಶಿವ ತಾಂಡವವನ್ನು ಸಂಯೋಜನೆ ಮಾಡಿರುವುದು ಕೂಡ ರಾವಣನೇ ಆಗಿದ್ದಾನೆ.
ರಾವಣನ ಪಾಂಡಿತ್ಯ ಹೇಗಿತ್ತು ಎಂದರೆ ವೇದ ವೇದಾಂಗಗಳನ್ನು ಅರಿದು ಕುಡಿದಿದ್ದ. ಅತ್ಯದ್ಭುತವಾದ ಜ್ಯೋತಿಷಿಯಾಗಿದ್ದ. ಬ್ರಹ್ಮನನ್ನೇ ತನ್ನ ಮನೆಯ ಪೌರೋಹಿತ್ಯಕ್ಕೆ ಕರೆಯುವಷ್ಟು ಅವನ ಪಾಂಡಿತ್ಯದ ಅಹಂಕಾರ ಬೆಳೆದಿತ್ತು. ಆಯುರ್ವೇದ ಮತ್ತು ವೃಕ್ಷ ಶಾಸ್ತ್ರಗಳಿಗೆ ಸಂಬಂಧಿಸಿದ ಹಾಗೆ ಅವನು ಗ್ರಂಥಗಳನ್ನು ಬರೆದಿದ್ದ. ಅದನ್ನು ಇವತ್ತಿಗೂ ಸುವರ್ಣ ವೃಕ್ಷಶಾಸ್ತ್ರ ಅಂತಲೇ ಕರೀತಾರೆ.
ವಿಷ್ಣುವಿನ ದ್ವಾರಪಾಲಕರುಗಳು ಋಷಿಮುನಿಯ ಶಾಪದಿಂದ ರಾವಣ ಹುಟ್ಟಿದ ಎಂಬ ಮಾಹಿತಿ ಇದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಜಯ-ವಿಜಯ ಎಂಬ ಇಬ್ಬರು ದ್ವಾರಪಾಲಕರು ಯಾವಾಗಲೂ ವೈಕುಂಠದ ದ್ವಾರದಲ್ಲಿ ನಿಂತು ವಿಷ್ಣುವಿನ ಸೇವೆ ಮಾಡುತ್ತಾರೆ. ಒಮ್ಮೆ ಸನಕಾದಿ ಮುನಿಯು ಶ್ರೀ ಹರಿ ವಿಷ್ಣುವನ್ನು ನೋಡಲು ಬಂದರು, ಆದರೆ ಜಯ-ವಿಜಯ ಅವರನ್ನು ತಡೆದರು. ಇದರಿಂದ ಕುಪಿತನಾದ ಸನಕಾದಿ ಮುನಿಯು ರಾಕ್ಷಸರಾಗಿ ಹುಟ್ಟುವಂತೆ ಶಾಪ ಕೊಟ್ಟನು.
ಆಗ ವಿಷ್ಣು ಬಂದು ಅವರ ಶಾಪ ವಿಮೋಚನೆಗಾಗಿ ಪ್ರಾರ್ಥಿಸಿದರು. ಆಗ ಸನಕಾದಿ ಮುನಿಯು ಹೀಗೆ ಹೇಳಿದನು, ಇವರಿಂದ ನಿನ್ನನ್ನು ಕಾಣಲು ಮೂರು ನಿಮಿಷ ತಡವಾಯಿತು, ಆದ್ದರಿಂದ ಈ ಮೂರು ಜನ್ಮಗಳು ರಾಕ್ಷಸರಾಗಿ ಹುಟ್ಟುತ್ತಾರೆ. ಹರಿಯೇ ಅವರನ್ನು ಅಂತ್ಯಗೊಳಿಸುತ್ತಾನೆ ಎಂದರು. ಅದರ ಅನುಸಾರ ತಮ್ಮ ಮೊದಲ ಜನ್ಮದಲ್ಲಿ ಜಯ ವಿಜಯ ಹಿರಣ್ಯಕಶ್ಯಪ್ ಮತ್ತು ಹಿರಣ್ಯಾಕ್ಷ ಎಂಬ ರಾಕ್ಷಸರಾದರು. ಒಮ್ಮೆ ಹಿರಣ್ಯಾಕ್ಷನು ಭೂಮಿಯನ್ನು ತ ಸಮುದ್ರದಲ್ಲಿ ಬಚ್ಚಿಟ್ಟನು, ಆಗ ವಿಷ್ಣುವು ವರಾಹ ಅವತಾರದಲ್ಲಿ ಆತನ ಕೊಂದು ಭೂಮಿಯನ್ನು ಮರುಸ್ಥಾಪಿಸಿದನೆಂದು ಹೇಳಲಾಗುತ್ತದೆ. ಹಿರಣ್ಯಕಶಿಪು ತನ್ನ ಸಹೋದರನ ಸಾವಿನಿಂದ ಬಹಳ ಕೋಪಗೊಂಡು ತಪ್ಪಸ್ಸು ಮಾಡಿ, ಬ್ರಹ್ಮದೇವನಿಂದ ವರ ಪಡೆದ. ಕಡೆಗೆ ವಿಷ್ಣುವು ನರಸಿಂಹನಾಗಿ ಅವತರಿಸಿ ಕೊಂದನು. ಎರಡನೇ ಜನ್ಮದಲ್ಲಿ ಜಯ-ವಿಜಯ ರಾವಣ ಮತ್ತು ಕುಂಭಕರ್ಣರಾದರು. ಈ ಜನ್ಮದಲ್ಲಿ ರಾವಣನು ಲಂಕೆಯ ರಾಜನಾಗಿದ್ದನು. ಕುಂಭಕರ್ಣ ಕ್ಷಣಾರ್ಧದಲ್ಲಿ ಸಾವಿರಾರು ಜನರು ಆಹಾರವನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ವಿಷ್ಣುವು ಅಯೋಧ್ಯೆಯ ರಾಜ ದಶರಥನ 7 ನೇ ಅವತಾರದಲ್ಲಿ ಶ್ರೀರಾಮನಾಗಿ ಜನಿಸಿದನು. ನಂತರ ರಾವಣ ಮತ್ತು ಕುಂಭಕರ್ಣರನ್ನು ಕೊಂದರು. ಮೂರನೇ ಜನ್ಮದಲ್ಲಿ, ಜಯ ವಿಜಯ್ ಅಂದರೆ ರಾವಣ ಮತ್ತು ಕುಂಭಕರ್ಣರು ಶಿಶುಪಾಲ ಮತ್ತು ದಂತವಕ್ರರಾಗಿ ಜನಿಸಿದರು. ಶಿಶುಪಾಲ ಮತ್ತು ದಂತವಕ್ರ ಇಬ್ಬರೂ ಶ್ರೀಕೃಷ್ಣನ ಚಿಕ್ಕಮ್ಮನ ಮಕ್ಕಳು, ಆದರೆ, ಇವರಿಗೆ ಕೃಷ್ಣನ ಬಗ್ಗೆ ದ್ವೇಷ ಇತ್ತು. ಅವರ ದುಷ್ಕೃತ್ಯಗಳಿಂದಾಗಿ ಶ್ರೀ ಕೃಷ್ಣನು ಅವರನ್ನು ಕೊಂದನು ಎಂದು ಉಲ್ಲೇಖಿಸಲಾಗಿದೆ.
ರಾಮಾಯಣದ ರಾವಣ ಇದ್ದ ಬೆಟ್ಟದ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿಲ್ಲ., ಸಾಕಷ್ಟು ದಾಖಲೆ ಮತ್ತು ಸಾಕ್ಷಿಗಳಿಂದ ರಾವಣ ಈ ಒಂದು ಬೆಟ್ಟದಲ್ಲಿ ಇದ್ದ ಎಂಬುವುದನ್ನು ಉಲ್ಲೇಖಿಸಲಾಗಿದೆ. ಅದುವೇ ಸಿಗ್ರಿಯ ಬೆಟ್ಟ. ಪ್ರಪಂಚದ 8 ನೇ ಅದ್ಭುತ ಶ್ರೀಲಂಕಾದಲ್ಲಿದೆ. ಎಲ್ಲಾ ಬೆಟ್ಟದ ಮೇಲೆ ಮರ, ಕಲ್ಲು ಬಂಡೆ ಇರುತ್ತೆ.. ಆದರೆ ಈ ಒಂದು ಬೆಟ್ಟದ ಮೇಲೆ ನಗರವೇ ಇದೆ. ಅಚ್ಚರಿ ಸಂಗತಿ ಎಂದ್ರೆ ಸಾವಿರಾರು ವರ್ಷಗಳ ಹಿಂದೆಯೇ.. ಯಾರು ಬಂದು ನಗರವನ್ನು ಸೃಷ್ಟಿ ಮಾಡಿರಬಹುದು. ಈ ಒಂದು ಬೆಟ್ಟವನ್ನು ಮಾರ್ಬಲ್ ಕಲ್ಲಿನಿಂದ ಕಟ್ಟಲಾಗಿದೆ. ಉಳಿ, ಸುತ್ತಿಗೆ ಇದ್ದ ಅಂದಿನ ಕಾಲಘಟ್ಟದಲ್ಲಿ ತುಂಬಾ ಅದ್ಭುತವಾಗಿ ಹೇಗೆ ನಿರ್ಮಿಸಲು ಸಾಧ್ಯವಾಯ್ತು ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ವರದಿ ಪ್ರಕಾರ ಇದನ್ನು ರಾವಣ ನಿರ್ಮಿಸಿರುವ ಉಲ್ಲೇಖವಿದೆ.
ರಾವಣನ ಪುಷ್ಪಕ ವಿಮಾನವು ಮನಸ್ಸಿನ ವೇಗದಲ್ಲಿ ಚಲಿಸುತ್ತಿತ್ತು. ಕಥೆಗಳಲ್ಲಿ, ಪುಷ್ಪಕ ವಿಮಾನದ ಆಕಾರವನ್ನು ನವಿಲು ಎಂದು ವಿವರಿಸಲಾಗಿದೆ. ಇದು ಸಾಕಷ್ಟು ಸೌಲಭ್ಯಗಳನ್ನು ಹೊಂದಿತ್ತು. ಅದರ ಗಾತ್ರದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವಿಮಾನವನ್ನು ಚಿನ್ನದಿಂದ ತಯಾರಿಸಲಾಗಿದ್ದು ಮತ್ತು ಕೆಲವು ವಿಶೇಷ ಮಂತ್ರಗಳಿಂದ ಮಾತ್ರ ಓಡಿಸಬಹುದಾಗಿತ್ತು. ಪುಷ್ಪಕ ವಿಮಾನವು ರಾವಣನನ್ನು ರಾವಣನು ಹೋಗಲು ಯೋಚಿಸಿದ ಸ್ಥಳಕ್ಕೆ ಕರೆದೊಯ್ಯುತ್ತಿತ್ತು ಎಂದು ನಂಬಲಾಗಿದೆ. ಈ ವಿಮಾನವು ಅನೇಕ ಶಕ್ತಿಗಳನ್ನು ಹೊಂದಿತ್ತು ಮತ್ತು ಆ ಸಮಯದಲ್ಲಿ ದೇವತೆಗಳ ಹತ್ತಿರವೂ ಅಂಥದ್ದೊಂದು ವಾಹನವಿರಲಿಲ್ಲವಂತೆ. ರಾಮಾಯಣದ ಶ್ಲೋಕಗಳಲ್ಲಿ, ದೊಡ್ಡ ಸನ್ಯಾಸಿಗಳು ಮಾತ್ರ ಪುಷ್ಪಕ ವಿಮಾನವನ್ನು ಪಡೆಯಬಹುದು ಎಂದು ವಿವರಿಸಲಾಗಿದೆ.
ಪುರಾಣಗಳಲ್ಲಿ ರಾವಣನ ಪುಷ್ಪಕ ವಿಮಾನವನ್ನು ವಿಶ್ವಕರ್ಮ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಈ ವಿಮಾನವನ್ನು ನಿರ್ಮಿಸಿ ವಿಶ್ವಕರ್ಮರು ಅದನ್ನು ಬ್ರಹ್ಮ ದೇವನಿಗೆ ನೀಡಿದರು. ಅದರ ನಂತರ ಬ್ರಹ್ಮ ಈ ವಿಮಾನವನ್ನು ಕುಬೇರನಿಗೆ ನೀಡಿದರು. ರಾವಣನು ತನ್ನ ಶಕ್ತಿಯಿಂದ ಕುಬೇರನಿಂದ ಈ ವಿಮಾನವನ್ನು ಕಸಿದುಕೊಂಡು ಅದನ್ನು ಬಳಸಲು ಪ್ರಾರಂಭಿಸಿದನು ಎನ್ನಲಾಗಿದೆ.
ಸಂಪತ್ತಿನ ದೇವತೆಯಾದ ಕುಬೇರನನ್ನು ರಾವಣನ ಹಿರಿಯ ಸಹೋದರ. ರಾವಣನು ಲಂಕಾ ನಗರವನ್ನು ಮತ್ತು ಪುಷ್ಪಕ ವಿಮಾನವನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡನು ಎನ್ನಲಾಗಿದೆ. ದಂತಕಥೆಗಳ ಪ್ರಕಾರ, ಶ್ರೀ ರಾಮನು ಈ ವಿಮಾನದಲ್ಲಿ ಅಯೋಧ್ಯೆಯನ್ನು ತಲುಪಿದ ನಂತರ, ಅವನು ಈ ವಿಮಾನವನ್ನು ಕುಬೇರನಿಗೆ ಸಂಪೂರ್ಣ ಗೌರವದಿಂದ ಹಿಂದಿರುಗಿಸಿದನು ಎನ್ನುವ ಕಥೆಯೂ ಇದೆ.
ರಾಮಾಯಣ ಕಾಲದ ರಾವಣನ ಬಳಿಯಿದ್ದ ಪುಷ್ಪಕ ವಿಮಾನದ ಬಗ್ಗೆ ತಿಳಿದಾಯ್ತು.. ಶ್ರೀಲಂಕಾದ ರಾಜನಾಗಿದ್ದ ರಾವಣ ಕೇವಲ ಪೌರಾಣಿಕ ಪಾತ್ರವಲ್ಲ, ಆತ ಐತಿಹಾಸಿಕ ವ್ಯಕ್ತಿ ಎಂದು ನಿರೂಪಿಸಲು ಶ್ರೀಲಂಕಾದ ಸಂಶೋಧಕರು ಈ ಹಿಂದೆ ಮುಂದಾಗಿದ್ದರು. ವಿಶ್ವದ ಮೊದಲ ಅನುಭವಿ ವೈಮಾನಿಕ ಎಂದು ಪ್ರತಿಪಾದಿಸುತ್ತಿರುವ ಅವರು, ರಾವಣನ ಆಳ್ವಿಕೆಯ ಅವಧಿಯಲ್ಲಿ ಶ್ರೀಲಂಕಾದಲ್ಲಿ ವಿಮಾನ ಸಂಚಾರವಿತ್ತು, ವಿಮಾನ ನಿಲ್ದಾಣಗಳೂ ಇದ್ದವು ಎಂದು ಈಗಲೂ ಪ್ರತಿಪಾದಿಸುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆ ಮಾಹಿತಿ ನೀಡಿರುವ ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆ ಉಪಮುಖ್ಯಸ್ಥ ಶಶಿ ದಾನತುಂಗೆ, “ರಾವಣ ಪ್ರತಿಭಾನ್ವಿತ ವ್ಯಕ್ತಿ. ಆಗಸದಲ್ಲಿ ಹಾರಾಟ ನಡೆಸಿದ ಮೊದಲಿಗ ರಾವಣ. ಆತ ಒಂದು ರೀತಿಯಲ್ಲಿ ವಿಮಾನ ಚಾಲಕನಿದ್ದಂತೆ. ಇದು ಪುರಾಣವಲ್ಲ, ನಿಜಾಂಶ. ಈ ಬಗ್ಗೆ ವಿಸ್ತ್ರತ ಸಂಶೋಧನೆ ನಡೆಯಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಇದನ್ನು ಸಾಬೀತು ಮಾಡುತ್ತೇವೆ,” ಎಂದು ಹೇಳಿಕೊಂಡಿದ್ದರು.