ಮಹಿಳಾ ರಾಜಕಾರಣಿಯೊಬ್ಬರ (ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ) ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೂನ್ 24ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸದ್ಯ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಮಹಜರ್ ಮಾಡಲಾಗಿದ್ದು, ಹಾಸನದ ಎಸ್ಪಿ ಕಛೇರಿ ಸಮೀಪ ಹಿಂದಿನ ನಿವಾಸದಲ್ಲಿ ಮಹಜರ್ ಮಾಡಲಾಗಿದೆ. ಹಾಸನ ಸಿಐಡಿ ಎಸ್ಪಿ ನೇತೃತ್ವದಲ್ಲಿ ಎಸ್ ಐಟಿ ಟೀಂ ಕರೆತರಲಾಗಿದೆ.