ನಮ್ಮ ಮೆಟ್ರೋ ದಲ್ಲಿ ಪದೇ ಪದೇ ನಿಯಮ ಉಲ್ಲಂಘನೆಯಗುತ್ತಿದ್ದು, ಮೆಟ್ರೋ ಸಿಬ್ಬಂದಿ ಎಷ್ಟೇ ಫೈನ್ ಹಾಕಿದ್ರು ಜನರು ಕ್ಯಾರೇ ಅನ್ನಂತಿಲ್ಲ.
ಹೌದು, ಕಳೆದ ಕೆಲವು ತಿಂಗಳ ಹಿಂದಷ್ಟೇ ಮೆಟ್ರೋ ದಲ್ಲಿ ವ್ಯಕ್ತಿಯೋರ್ವ ಗೋಬಿ ಮಂಚೂರಿ ತಿಂದಿದ್ದ. ಹಾಗೆಯೇ ಕಳೆದ ತಿಂಗಳ ಹಿಂದೆ ಇಬ್ಬರು ಪ್ರೇಮಿಗಳು ಅಶ್ಲೀಲವಾಗಿ ವರ್ತನೆ ಮಾಡಿದ್ರು. ಇದೀಗ ಮತ್ತೆ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಅದೇ ರೀತಿ ದೃಶ್ಯ ಕಂಡು ಬಂದಿದೆ.
ಚಲಿಸುವ ಮೆಟ್ರೋದಲ್ಲಿ ವ್ಯಕ್ತಿಯೋರ್ವ ದ್ರಾಕ್ಷಿ, ಗೊಡಂಬಿಣ ಬಾದಾಮಿ ಸೇರಿ ಹಲವು ಡ್ರೈ ಫ್ರೂಟ್ಸ್ ತಿಂದಿದ್ದಾರೆ.
ನಾಗಸಂದ್ರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ಆಗಿದ್ದು, ಇಷ್ಟಾದ್ರೂ ಯಾವುದೇ ದಂಡ ವಿಧಿಸದ ಮೆಟ್ರೋ ಸಿಬ್ಬಂದಿ ಬೇಜವಾಬ್ದಾರಿತನ ತೋರಿಸಿದ್ದಾರೆ.