ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ನಟ ದರ್ಶನ್ ಮತ್ತು ಗ್ಯಾಂಗ್ ಸದಸ್ಯರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯಲ್ಲಿ ಭೀಕರವಾಗಿ ಹತ್ಯೆ ಮಾಡಿ ಈಗ ಜೈಲು ಸೇರಿರೋದು ಗೊತ್ತೆ ಇದೇ. ಈಗ ಸುದ್ದಿ ಏನಂದ್ರೆ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿಯಾಗಿ ಹತ್ತು ನಿಮಿಷಗಳ ಕಾಲ ಮಾತನಾಡಿದ್ದಾರಂತೆ.
ಹೌದು, ಜೈಲಿನ ಆಸ್ಪತ್ರೆಯಲ್ಲಿ ಪ್ರತಿ ದಿನ ದರ್ಶನ್ ಗ್ಯಾಂಗ್‌ಗೆ ಇನ್ಸೂಲಿನ್ ಕೊಡಿಸಲಾಗುತ್ತದೆ. ದರ್ಶನ್‌ಗೆ ಇನ್ಸೂಲಿನ್ ಕೊಡಿಸುವ ವೇಳೆ ಆಸ್ಪತ್ರೆಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಮಾಡಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಇಬ್ಬರು ಜೈಲು ದಿನಗಳ ಬಗ್ಗೆ ಮಾತಾಡಿದ್ದಾರೆ. ಜೊತೆಗೆ ತಾವಿರು ಸ್ಥಿತಿಗೆ ನೊಂದುಕೊಂಡಿದ್ದಾರೆ. ಈ ವೇಳೆ ಪವಿತ್ರಾ ಗೌಡಗೆ ಎಲ್ಲಾ ಸರಿ ಹೋಗುತ್ತೆ ಎಂದು ದರ್ಶನ್ ಸಮಾಧಾನ ಪಡಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ನಟ ದರ್ಶನ್ ಅವರನ್ನು ಭೇಟಿಯಾಗಲು ಜೈಲಿಗೆ ಪವಿತ್ರಾ ಗೌಡ ಆಪ್ತ ಸಮತಾ ಕೂಡ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ. ಪವಿತ್ರಾ, ಸಮತಾ ಇಬ್ಬರು ಕ್ಲೋಸ್ ಫ್ರೆಂಡ್ಸ್. ಪವಿತ್ರಾ ಗೌಡ ಅವರನ್ನು ಭೇಟಿ ಮಾಡಿ ಬಂದಿದ್ದ ದರ್ಶನ್ ಬಳಿಕ ಸಮತಾ ಅವರನ್ನು ಭೇಟಿಯಾಗಿದ್ದಾರೆ. ಪವಿತ್ರಾ ಗೌಡ ಅವರ ಜೊತೆ ಬಹಳ ವರ್ಷಗಳಿಂದ ಜೊತೆಗಿರುವ ಸಮತಾ ಅವರು ದರ್ಶನ್ ಅವರನ್ನ ಭೇಟಿ ಮಾಡಿ ಮಾತನಾಡಿ ಬಂದಿದ್ದಾರೆ.