ಬೆಂಗಳೂರು: ದೊಡ್ಮನೆಯಲ್ಲಿ ವಿಚ್ಚೇದನದ ಬಿರುಗಾಳಿ ಎದ್ದಿದ್ದು, ಯುವ -ಶ್ರೀದೇವಿ ದಾಂಪತ್ಯ ಮುರಿದು ಬಿಳೋ ಹಂತ ತಲುಪಿದೆ. ಜೂನ್ 6ರಂದು ಯುವ ರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆದಿದೆ. ಯುವ -ಶ್ರೀದೇವಿ ವಿಚ್ಛೇದನ ಅರ್ಜಿ ವಿಚಾರಣೆ ಆಗಸ್ಟ್ 23ಕ್ಕೆ ಮುಂದೂಡಿಕೆಯಾಗಿದೆ.
ಹೌದು ಯುವ -ಶ್ರೀದೇವಿ ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ. ಇಂದು 1 ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಅವರಿದ್ಧ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಿಚ್ಚೇದನ ಅರ್ಜಿಗೆ ಯುವ ಪತ್ನಿ ಶ್ರೀದೇವಿ ಭೈರಪ್ಪ ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಮನವಿಗೆ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾಗಿರುವ ಕಾರಣ ಮಿಡಿಯೇಷನ್ ಕೌನ್ಸಿಲಿಂಗ್ ಮುಕ್ತಾಯವಾಗಲಿ. ಮೊದಲು ಕೌನ್ಸಿಲಿಂಗ್ ಮುಕ್ತಾಯವಾಗಬೇಕು.ಕೌನ್ಸಿಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಬಳಿಕ ವಿಚ್ಚೇದನದ ಆಕ್ಷೇಪಣೆ ಕೇಳುವುದಾಗಿ ನ್ಯಾಯಾಧೀಶರು ಹೇಳಿದರು.
ಅಂತಿಮವಾಗಿ ಕೋರ್ಟ್ ಆಗಸ್ಟ್ 23ಕ್ಕೆ ಮಿಡಿಯೇಷನ್ ದಿನಾಂಕ ನಿಗದಿ ಮಾಡಿ ವಿಚಾರಣೆ ಮುಂದೂಡಿತು. ಇನ್ನೂ ಯುವ ಹಾಗೂ ಶ್ರೀದೇವಿ 7 ವರ್ಷದ ಪ್ರೀತಿ 4 ವರ್ಷದ ದಾಂಪತ್ಯ ಜೀವನ ವಿಚ್ಚೇದನದ ಮೂಲಕ ಅಂತ್ಯವಾಗುತ್ತಾ ? ಎಂದು ಕಾದು ನೋಡಬೇಕಿದೆ.
ಶ್ರೀದೇವಿ-ಯುವರಾಜ್ ವಿಚ್ಛೇದನ !
Date: