ಮೈಸೂರು: ಮುಡಾ ಹಗರಣ ಸಿಬಿಐಗೆ ವಹಿಸಲಿ ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಗಂಭೀರವಾಗಿದ್ದು, ಅನೇಕ ಪ್ರಭಾವಿಗಳ ಹೆಸರು ಕೂಡ ಕೇಳಿ ಬಂದಿದೆ. ಆಗಾಗಿ ಈ ಪ್ರಕರಣವನ್ನ ನಿಸ್ಪಕ್ಷಪಪಾತವಾಗಿ ತನಿಖೆ ಮಾಡಬೇಕು ಎಂದು ಸಿಬಿಐಗೆ ವಹಿಸಲು ತಿಳಿಸಿದ್ದೇನೆ ಎಂದು ಹೇಳಿದ್ರು.
ಇನ್ನೂ ಮುಡಾ ಇರೋದು ಸಾರ್ವಜನಿಕರ ಒಳಿತಿಗಾಗಿ, ನಿವೇಶನ ವಂಚಿತ ಜನರಿಗೆ ನಿವೇಶನ ಕೊಡಲಿಕ್ಕೆ ಆದ್ದರಿಂದ ನಾವು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ನಾನು ಮುಡಾ ಸಭೆಯಲ್ಲಿ ಭಾಗಿಯಾದಾಗ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಮುಡಾ ಹಗರಣ ಸಿಬಿಐಗೆ ವಹಿಸಲಿ: ಯದುವೀರ್ ಒಡೆಯರ್
Date: