No menu items!
16.9 C
Munich
Friday, October 2, 2026

ಸಿಯಾಚಿನ್‌ ಯುದ್ಧಭೂಮಿಗೆ ಆಯ್ಕೆಯಾದ ಮೈಸೂರಿನ ಸುಪ್ರಿತಾ

Must read

ಮೈಸೂರು: ಸಿಯಾಚಿನ್ ಯುದ್ಧಭೂಮಿಗೆ ಮೈಸೂರಿನ ವಲ್ಲಭಭಾಯಿ ನಗರದ ನಿವಾಸಿ ಸುಪ್ರಿತಾ ಅವರು ಆಯ್ಕೆ ಆಗಿದ್ದಾರೆ. ಇವರು ಭಾರತೀಯ ವಾಯುಸೇನೆಯ ಕ್ಯಾಪ್ಟನ್ ಆಗಿದ್ದು, ಇದೀಗ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.
ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ ಮೊದಲ ಮಹಿಳಾ ಯೋಧೆ ಎಂಬ ಖ್ಯಾತಿ ಗಳಿಸಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ತಿರುಮಲ್ಲೇಶ್, ನಿರ್ಮಲಾ ದಂಪತಿ ಪುತ್ರಿ ಸುಪ್ರಿತಾ. ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಹಾಗೂ ಎನ್‌ಸಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article