ಬೆಂಗಳೂರು: ಸಿಎಂ ಪ್ರಾಮಾಣಿಕರಿದ್ದರೆ ಎಸ್ಐಟಿ ರಚನೆ ಮಾಡಿದಾಗಲೇ ನಾಗೇಂದ್ರ, ದದ್ದಲ್ ಅವರನ್ನ ನೋಟಿಸ್ ಕೊಟ್ಟು ಕರೆಸಬೇಕಾಗಿತ್ತು. ಇದ್ಯಾವುದನ್ನೂ ಎಸ್ಐಟಿ ಮಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸಿಎಂ ಪ್ರಾಮಾಣಿಕರಿದ್ದರೆ ಎಸ್ಐಟಿ ರಚನೆ ಮಾಡಿದಾಗಲೇ ನಾಗೇಂದ್ರ, ದದ್ದಲ್ ಅವರನ್ನ ನೋಟಿಸ್ ಕೊಟ್ಟು ಕರೆಸಬೇಕಾಗಿತ್ತು. ಇದ್ಯಾವುದನ್ನೂ ಎಸ್ಐಟಿ ಮಾಡಲಿಲ್ಲ.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಇಟ್ಟಿರುವ ಹಣವನ್ನ ದೋಚಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತನಿಖೆ ಆಗಬೇಕು. ಸಿಬಿಐ ಕೂಡ ತನಿಖೆ ಮಾಡುತ್ತಿದೆ. ಇ.ಡಿ ಸಹ ತನಿಖೆ ಮಾಡುತ್ತಿರೋದು ಸ್ವಾಗತಾರ್ಹ. ದೊಡ್ಡ ಸಮುದಾಯಕ್ಕೆ ಅನ್ಯಾಯ ಆಗಿದೆ. ಅದಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಇ.ಡಿ ಮಾಡುತ್ತಿದೆ. ಅದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರವನ್ನು ಇ.ಡಿ ಮೂಲಕ ಅಲ್ಲಾಡಿಸುತ್ತಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಣವನ್ನ ದೋಚಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತನಿಖೆ ಆಗಬೇಕು !
Date: