ಬೆಂಗಳೂರು: ಅಹೋರಾತ್ರಿ ಧರಣಿ ಅಲ್ಲ ಡ್ರಾಮಾ ಅಷ್ಟೇ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ನಾಯಕರಿಲ್ಲ, ಅದು ನಿಷ್ಕ್ರಿಯ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇವರು ಡ್ರಾಮಾ ಮಾಡ್ತಿದ್ದಾರೆ. ಇದು ಅಹೋರಾತ್ರಿ ಧರಣಿ ಅಲ್ಲ ಡ್ರಾಮಾ ಅಷ್ಟೇ.
ವಿಪಕ್ಷದವರು ನಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಈ ಧರಣಿ. ಇನ್ನೂ ಸಾಕಷ್ಟು ಜನರಿಗೆ ಬಿಪಿ, ಶುಗರ್ ಇದೆ. ಆರೋಗ್ಯ ಸರಿಪಡಿಸಿಕೊಳ್ಳಲು ಪಾದಯಾತ್ರೆ ಮಾಡಬಹುದು ಮಾಡಲಿ. ಇನ್ನೂ 20 ವರ್ಷ ಅವರೆಲ್ಲಾ ರಾಜಕಾರಣ ಮಾಡಲು ಫಿಟ್ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಮುಡದಲ್ಲಿ 200% ಯಾವುದೇ ಹಗರಣ ನಡೆದಿಲ್ಲ. ಮುಖ್ಯಮಂತ್ರಿಗಳ ಧರ್ಮ ಪತ್ನಿಗೆ ಅವರ ಕುಟುಂಬದಿಂದ ಆಸ್ತಿ ಬಂದಿದೆ. ಈಗ ಕೇಂದ್ರ ಬಜೆಟ್ ವೈಫಲ್ಯ ಮುಚ್ಚಿಕೊಳ್ಳಲು ಮೇಲಿನಿಂದ ಸೂಚನೆ ಬಂದಿದೆ. ಅದಕ್ಕೆ ಇಲ್ಲಿ ಧರಣಿ ನಡೆಯುತ್ತಿದೆ. ಈ ಡ್ರಾಮಾದ ಹಿಂದಿರುವವರು ಯಾರು ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ವಿಪಕ್ಷದವರು ನಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಈ ಧರಣಿ !
Date: