ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೈನಿಕರು ಮಾಡಿದ ತ್ಯಾಗ ಅಮರ ಮತ್ತು ಕಾರ್ಗಿಲ್ ವಿಜಯ್ ದಿವಸ್ ರೂಪದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಪಾಕಿಸ್ತಾವು ಭಯೋತ್ಪಾದನೆ ಮತ್ತು ನಕಲಿ ಯುದ್ಧದ ನೆರವಿನಿಂದ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಆ ಭಯೋತ್ಪಾದನೆಯನ್ನು ಪೋಷಿಸುತ್ತಿರುವವರೆಗೆ ತಮ್ಮ ನೀಚ ತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ, ಪಾಕಿಸ್ತಾನವು ದುಸ್ಸಾಹಸ ನಡೆಸಿದಾಗಲೆಲ್ಲಾ ಸೋಲನ್ನು ಎದುರಿಸಿದೆ. ಅದು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ. ಅದು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಹೇಳಿದರು.
ಪಾಕಿಸ್ತಾನವು ದುಸ್ಸಾಹಸ ನಡೆಸಿದಾಗಲೆಲ್ಲಾ ಸೋಲನ್ನು ಎದುರಿಸಿದೆ: ಪ್ರಧಾನಿ ಮೋದಿ
Date: