ಬೆಂಗಳೂರು:- ವಾಹನ ಸವಾರರೇ ಇದು ನೀವು ಈ ಸುದ್ದಿ ನೋಡಲೇಬೇಕು. ಯಾಕೆ ಗೊತ್ತಾ ಪ್ರತಿಷ್ಟಿತ ಬೆಂಗಳೂರಿನ ಈ ರಸ್ತೆ 1 ವಾರ ಬಂದ್ ಆಗಲಿದೆ.
ಹೌದು, ಹೊರ ವರ್ತುಲ ರಸ್ತೆಯ ಐಬಿಐಎಸ್ ಹೊಟೇಟಲ್ನಿಂದ ದೇವರಬೀಸನಹಳ್ಳಿ ಜಂಕ್ಷನ್ವರೆಗಿನ ಸರ್ವಿಸ್ ರಸ್ತೆಯಲ್ಲಿ ಒಂದು ವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬಿಎಂಆರ್ಸಿಎಲ್ ಮತ್ತು ಬೆಸ್ಕಾಂ ವತಿಯಿಂದ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆಗಸ್ಟ್ 13ರವರೆಗೆ ಈ ರಸ್ತೆಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿ ಎಂದು ಬೆಂಗಳೂರು ಸಂಚಾರ ಪೊಲೀಸ್ ಮಾಧ್ಯಮ ಪ್ರಕಟಣೆ ಹೊರಡಸಿದೆ. ಬದಲಿ ಮಾರ್ಗ ಸೂಚಿಸಲಾಗಿದೆ.
ಪರ್ಯಾಯ ಮಾರ್ಗ
ಕಾಮಗಾರಿ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ದೇವರಬಿಸನಹಳ್ಳಿ ಮೇಲು ಸೇತುವೆ ಮೂಲಕ ಸಂಚರಿಸಬಹುದಾಗಿದೆ.
ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಷೇಧ
ನೈಸ್ ರಸ್ತೆಯಲ್ಲಿ ಎಲ್ಲ ದಿನ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಹೊಸ ನಿಯಮ ಆಗಸ್ಟ್ 2 ರಿಂದ ಜಾರಿಗೆ ಬಂದಿದೆ.
ಭಾರಿ ಸರಕು ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸಲು ಸಮಯ ನಿಗದಿ ಮಾಡಲಾಗಿದೆ. ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ಮಹಾನಗರದ ಒಳಗಿನ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಆದರೆ, ಎಲ್ಲ ಶನಿವಾರಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ. ಇನ್ನುಳಿದಂತೆ ವಾರದ ಆರು ದಿನಗಳಲ್ಲಿ ಮೊದಲಿನಂತೆಯೇ ಮುಂದುವರೆಯಲಿದೆ.