ಮೈಸೂರು: ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನ್ನ 4 ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ. ಅವರ ಈ ಪ್ರಯತ್ನ ವಿಫಲವಾಗುತ್ತೆ. ನಾನು 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ.
2 ಬಾರಿ ಉಪಮುಖ್ಯಮಂತ್ರಿಯಾಗಿದ್ದೆ, 2 ಬಾರಿ ವಿಪಕ್ಷ ನಾಯಕ ನಾಗಿದ್ದೆ. 15 ಬಾರಿ ಬಜೆಟ್ ಮಂಡಿಸಿದ್ದೇನೆ. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಆಸ್ತಿ ಮೇಲೆ ವ್ಯಾಮೋಹವಿಲ್ಲ. ವಾಮಮಾರ್ಗದಲ್ಲಿ ಮಾಡೋದಾಗಿದ್ದರೆ ಅಧಿಕಾರ ಇತ್ತು, ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು. ಆದ್ರೆ ನನಗೆ ಆಸ್ತಿ ಮೇಲೆ ವ್ಯಾಮೋಹ ಇಲ್ಲ ಎಂದು ಹೇಳಿದ್ದಾರೆ.