ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?

Date:

ಬಹು ನಿರೀಕ್ಷಿತ ಎಂ.ಎಸ್ ಧೋನಿ ಜೀವನಾಧಾರಿತ ಚಿತ್ರ ದಿ ಅನ್ ಟೋಲ್ಡ್ ಸ್ಟೋರಿ ಚಿತ್ರ ತೆರೆ ಕಾಣೋಕು ಮೊದ್ಲು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರೋದಂತೂ ಸತ್ಯ. ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಕುರಿತಾಗಿ ನಿರ್ಮಿಸಿರೋ ಈ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲೂ ಒಂದು ಪ್ರಮುಖ ತಪ್ಪು ನಡೆದಿರೋದನ್ನ ಇಲ್ಲಿ ಗಮನಿಸಬಹುದಾಗಿದೆ. ಅದ್ಯಾವ ತಪ್ಪು ಅಂದ್ರೆ.. ಧೋನಿ ಸಹೋದರ ನರೇಂದ್ರ ಸಿಂಗ್ ಧೋನಿ ಕುರಿತಾಗಿ.. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಬ್ಬರು ಒಡಹುಟ್ಟಿದವರಿದ್ದಾರೆ ಅವರೇ.. ಜಯಂತಿ ಗುಪ್ತ ಹಾಗೂ ನರೇಂದ್ರ ಸಿಂಗ್ ಧೋನಿ. ಆದ್ರೆ ವಿಷಯ ಏನಪ್ಪಾ ಅಂದ್ರೆ ಧೋನಿ ಜೀವನಾಧರಿತ ಸಿನಿಮಾದಲ್ಲಿ ಕೇವಲ ಜಯಂತಿ ಗುಪ್ತಾ ಅವರ ಪಾತ್ರವನ್ನು ಮಾತ್ರ ಬಿಂಬಿಸಲಾಗಿದೆ. ಜಯಂತಿ ಗುಪ್ತ ಅವರ ಪಾತ್ರವನ್ನು ನಟಿ ಭೂಮಿಕಾ ಚಾವ್ಲಾ ನಿರ್ವಹಿಸಿರೋದನ್ನ ನೋಡಿರ್ಬೋದು. ಆದ್ರೆ ನರೇಂದ್ರ ಸಿಂಗ್ ಎಲ್ಲಿ..? ಈ ಪ್ರಶ್ನೆಗೆ ಅವರಿಂದಲೇ ಕೇಳೋ ಕುತೂಹಲದಿಂದ ಅವರಿಗೆ ಅನೇಕ ಜನರು ಪತ್ರದ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ನರೇಂದ್ರ ಸಿಂಗ್ ಧೋನಿ ಅವರ ಉತ್ತರವೇನು ಅನ್ನೋದ್ನ ತಿಳಿಯೋಣ ಬನ್ನಿ
‘ಯಾಕೆ ನಿಮ್ಮ ಪಾತ್ರವನ್ನು ಸಿನಿಮಾದಲ್ಲಿ ಅಳವಡಿಸಿಕೊಂಡಿಲ್ಲ’.
“ನನ್ನ ರೋಲ್ ತೆಗೆದುಕೊಳ್ಳೋ ಬಿಡೋದು ಸಿನಿಮಾ ನಿರ್ಮಾಣ ಮಾಡೋರ್ಗೆ ಬಿಟ್ಟಿದ್ದು, ಅದನ್ನ ನನ್ನ ಬಳಿ ಕೇಳುದ್ರೆ ನಾನೇನು ಹೇಳೋದು” ಯಾರ ಪಾತ್ರ ಅತೀ ಮುಖ್ಯವೋ ಅದನ್ನ ಅವರು ಮಾಡಿದ್ದಾರೆ ಅಷ್ಟೆ.
ಇದು ಉದ್ದೇಶಪೂರ್ವಕವಾಗಿಯೇ ನಡೆದ ಸಂಚು ಅದರ ಹಿಂದಿನ ಬಲವಾದ ಕಾರಣ ಏನು?
ನಾನು ಮಾಹಿ ಜೀವನದಲ್ಲಿ ಹೆಚ್ಚು ಕೊಡುಗೆ ಸಲ್ಲಿಸದೇ ಇದ್ದಿರಬಹುದೇನೋ ಆ ಕಾರಣಕ್ಕಾಗಿ ಚಿತ್ರದಲ್ಲಿ ನನ್ನ ಪಾತ್ರವನ್ನು ಅಳವಡಿಸಿಕೊಂಡಿಲ್ಲ ಅಷ್ಟೆ. ಆದರೆ ಮಾಹಿ ಬಾಲ್ಯದಿಂದ ಯೌವ್ವನದ ವರೆಗೂ ಆತ ಪಟ್ಟ ಕಠಿಣ ಪರಿಶ್ರಮವೇ ಇಂದು ವಿಶ್ವಕ್ಕೆ ಆತ ಎಮ್‍ಎಸ್‍ಡಿ ಆಗಿರೋದು. ಅದು ನಮ್ಮ ಕುಟುಂಬಕ್ಕಲ್ಲ.
ಅದು ಸತ್ಯ.. ಆದ್ರೆ ಧೋನಿ ಅವರ ಜೀವನದುದ್ದಕ್ಕೂ ಏಕಾಂಗಿಯಾಗಿ ಹೋರಾಟ ಮಾಡುದ್ರಾ..? ಆದ್ರೂ ಅವರ್ಯಾಕೆ ತಮ್ಮ ಜೀವನದ ಮಹತ್ವದ ವಿಚಾರವನ್ನು ಹೇಳಲಿಲ್ಲ?
ನಾನು 10 ವರ್ಷನವನಿದ್ದಾಗ ಧೋನಿ ಮೊದಲ ಬಾರಿಗೆ ಬ್ಯಾಟ್ ಹಿಡಿದದ್ದು. 1991ರಿಂದ ನಾನು ಮನೆಯಿಂದ ಹೊರಗಿದ್ದು ಅಲ್ಮೋರಾದ ಕುಮೋನ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದೆ. ಬಾಲ್ಯದಿಂದಲೂ ಮಾಹಿಯ ನೈತಿಕ ಜೀವನದಲ್ಲಿ ನನ್ನ ಪಾತ್ರವೂ ಕಡಿಮೆ. ಇನ್ನು ಅವರ ಪ್ರಮುಖ ವಿಚಾರಗಳ ಕುರಿತಾಗಿ ಸಿನಿಮಾ ಮಾಡೋದು ಕಷ್ಟ.
ಈ ಹಿಂದೆ ನೀವು ನೋಡಿದ ಎಂಎಸ್ ಧೋನಿ ಆಡಿದ ಆಟದಲ್ಲಿ ಮರೆಯಲಾರದ ಆಟ ಯಾವುದು?
ನನಗಿನ್ನೂ ನೆನಪಿದೆ ಆಗ ನಾನು ರಜೆ ನಿಮಿತ್ತ ಮನೆಗೆ ಬಂದಿದ್ದೆ. ಆಗ ರಾಂಚಿಯಲ್ಲಿ ಜಿಲ್ಲಾ ಮಟ್ಟದ ಕ್ರಿಕೇಟ್ ಪಂದ್ಯಾವಳಿ ವೇಳೆ ಧೋನಿ ಒಂದೇ ಓವರ್‍ನಲ್ಲಿ ಐದು ಫೋರ್ ಬಾರ್ಸಿದ್ರು. ತುಂಬಾ ಅದ್ಭುತವಾಗಿ ಆಟ ಪ್ರದರ್ಶನ ಮಾಡಿದ್ರು. ಆಗಾಗ ನಾನು ಮನೆಗೆ ಬಂದಾಗ ಅವರು ಸ್ಥಳಿಯರೊಂದಿಗೆ ಆಟವಾಡೋದನ್ನ ನೋಡ್ತಾ ಇದ್ದೆ ಎಂದು ಹೇಳಿದ್ದಾರೆ.
ಇನ್ನು ಸ್ವತಃ ಕ್ರೀಡಾ ಪಟುವಾಗಿರುವ ನರೇಂದ್ರ ಸಿಂಗ್ ಧೋನಿ ಅವರಿಗೆ ಪತ್ರದಲ್ಲಿ ‘ನೀವು ಕ್ರೀಡೆಯ ಬಗ್ಗೆ ಹೆಚ್ಚು ಒಲವು ಉಳ್ಳವರೇ’? ಎಂದು ಕೇಳಿದಾಗ.. ಓಹ್ ಎಸ್. ನಾನು ಕೂಡ ಫುಟ್ಬಾಲ್ ಕ್ರೀಡಾಪಟು. ಅಷ್ಟೇ ಅಲ್ಲ ಶಾಲಾ ಅವಧಿಯಲ್ಲಿ ಡಿಎವಿ ಪರವಾಗಿ ಪ್ರತಿನಿಧಿಸುತ್ತಾ ಇದ್ದೆ ಎಂದಿದ್ದಾರೆ.
ಆದ್ರೆ ಸ್ವತಃ ಸಹೋದರನ ಕುರಿತಾಗಿ ಧೋನಿ ಕುರಿತಾದ ದಿ ಅನ್‍ಟೋಲ್ಡ್ ಸ್ಟೋರಿಯಲ್ಲಿ ನರೇಂದ್ರ ಸಿಂಗ್ ಧೋನಿ ಕುರಿತು ಯಾವುದೇ ಪಾತ್ರವಿಲ್ಲ ಅನ್ನೋದೇ ಒಂದು ಪ್ರಶ್ನೆಯಾಗಿ ಉಳಿದಿದೆ.

Like us on Facebook  The New India Times

POPULAR  STORIES :

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...