ಯಾದಗಿರಿ:- ಯಾದಗಿರಿ ಪಿಎಸ್‌ಐ ಪರುಶುರಾಮ್ ಸಾವಿನ ಕೇಸ್ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡ್ತಿದೆ. ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಮಗನಿಗೆ ಸಂಕಷ್ಟ ಎದುರಾಗಿದೆ. ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪಣ್ಣಗೌಡ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ ಅನ್ನೋ ಆರೋಪ ಮಾಡಲಾಗಿದೆ. ಸದ್ಯ ಹೆಚ್ಚಿನ ತನಿಖೆ ಕೈಗೊಂಡಿರುವ CID ಟೀಮ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಯಲ್ಲಿ ತಲಾಶ್ ನಡೆಸಿದೆ.
ಚೆನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ.
ಪೊಸ್ಟಿಂಗ್ ವಿಚಾರವಾಗಿ ಪಿಎಸ್ಐ ಪರಶುರಾಮ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಇದೇ ಶಾಸಕರ ಕಚೇರಿಯಲ್ಲಿ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಹಾಗಾದ್ರೆ ಎಷ್ಟು ಬಾರಿ ಪಿಎಸ್ಐ ಪರಶುರಾಮ, ಶಾಸಕ ಚೆನ್ನಾರೆಡ್ಡಿ ಭೇಟಿಯಾಗಿದ್ದರು? ಯಾವ ವಿಚಾರಕ್ಕೆ ಭೇಟಿಯಾಗಿರಬಹುದು ಸೇರಿ ಹಲವು ವಿಷಯಗಳ ಬಗ್ಗೆ ತಂಡ ಮಾಹಿತಿ ಪಡೆಯುತ್ತಿದೆ.
ಶಾಸಕ ಚೆನ್ನಾರೆಡ್ಡಿ, ಪಿಎಸ್ಐ ಪರಶುರಾಮ ಭೇಟಿಯ ವಿಡಿಯೋ ಕಲೆ ಹಾಕಲು ಸಿಐಡಿ ಮುಂದಾಗಿದೆ. ಶಾಸಕ ಚೆನ್ನಾರೆಡ್ಡಿ ಸ್ಥಳೀಯವಾಗಿ ಇದೇ ಕಚೇರಿಯಲ್ಲಿ ಜನರಿಗೆ ಸಿಗುತ್ತಿದ್ರು. ಹೀಗೆ ಹಲವು ಆಯಾಮಗಳಲ್ಲಿ ಕಚೇರಿಗೆ ಭೇಟಿ ನೀಡಿ ಸಿಐಡಿ ತನಿಖಾ ತಂಡ ಮಾಹಿತಿ ಪಡೆದಿದೆ ಎನ್ನಲಾಗಿದೆ.