ಬೆಳ್ಳುಳ್ಳಿ ಇಲ್ಲದೇ ಅಡುಗೆ ಪೂರ್ಣಗೊಳ್ಳುವುದಿಲ್ಲ ಎಂಬ ಹಿರಿಯರ ಮಾತು ಅಕ್ಷರಷಃ ಸತ್ಯ. ಬೆಳ್ಳುಳ್ಳಿ ಕೇವಲ ಅಡುಗೆ ಪದಾರ್ಥವಾಗಿ ಮಾತ್ರ ಬಳಕೆಯಾಗುವುದಿಲ್ಲ ಜೊತೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯ ಏಷ್ಯಾ ಮೂಲಗಳಿಂದ ಬಂದ ಸಾಂಬಾರ ಪದಾರ್ಥವು ವಿಶ್ವದಾದ್ಯಂತ ಇದರ ಬೇಡಿಕೆ ಹೆಚ್ಚಿದೆ. ಆರೋಗ್ಯ ಸಂಬಂಧಿ ವಿಷಯಕ್ಕೂ ಬಹಳ ಉಪಕಾರಿಯಾದ ಈ ಬೆಳ್ಳುಳ್ಳಿಯಿಂದ ಯಾವ ಯಾವ ಕಾಯಿಲೆಗಳಿಗೆ ದಿವ್ಯ ಔಷಧಿ ಎಂದು ನಾವಿಲ್ಲಿ ತಿಳಿಸುತ್ತಿದ್ದೇವೆ ನೋಡಿ..
• ಬೆಳ್ಳುಳ್ಳಿ ಮಾನವನ ಚರ್ಮವನ್ನು ಕಾಂತಿಗೊಳಿಸುವ ಜೊತೆಗೆ ನೆರಿಗೆಯನ್ನು ಇಲ್ಲವಾಗಿಸುತ್ತದೆ.
• ಋತುಚಕ್ರದ ಸಂದರ್ಭದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಒಂದು ವಾರಕ್ಕೆ ಮುಂಚಿತವಾಗಿ ಬೆಳ್ಳುಳ್ಳಿ ಎರಡು ಎಸಳುಗಳನ್ನು ಬೆಲ್ಲದ ಜೊತೆ ಪ್ರತಿ ನಿತ್ಯ ರಾತ್ರಿ ಮಲಗುವ ವೇಳೆಯಲ್ಲಿ ಸೇವಿಸಿದರೆ ಹೊಟ್ಟೆ ನೋವು ಬರುವ ಸಂಭವ ಕಡಿಮೆ.
• ಬೆಳ್ಳುಳ್ಳಿಯಿಂದ ಮಾರಕ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಗಳಿಗೆ ರಾಮಬಾಣವಿದ್ದಂತೆ.
• ಮೂರು-ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಹಾಲಿನೊಂದಿಗೆ ಕುದಿಸಿ ರಾತ್ರಿ ವೇಳೆ ಕುಡಿಯುವುದರಿಂದ ಅಸ್ತಮಾದಿಂದ ಮುಕ್ತಿ ಹೊಂದಬಹುದು.
• ಮುಂಜಾನೆ ಎದ್ದ ಕೂಡಲೇ 3-4 ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಬಿಳಿರಕ್ತ ಕಣಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ.
• ಬಿಸಿ ನೀರಿನಲ್ಲಿ ಅರ್ಧ ಚಮಚ ನಿಂಬೆ ರಸ ಹಾಗೂ ಬೆಳ್ಳುಳ್ಳಿಯ ಎರಡು ಎಸಳುಗಳನ್ನು ಬೆರೆಸಿ ಮೂರು ತಿಂಗಳವರೆಗೆ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.
• ಬೆಳ್ಳುಳ್ಳಿಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಎಲ್‍ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
• ನಿತ್ಯವೂ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆಗಾಗ ಶೀತ, ನೆಗಡಿ ಭಾಧೆಯ ವಿರುದ್ದ ರಕ್ಷಣೆ ಪಡೆಯಬಹುದು.
• ಬೆಳ್ಳುಳ್ಳಿ ಮಿಶ್ರಣ ಎಣ್ಣೆ ಹಚ್ಚುವುದರಿಂದ ಕಾಲುನೋವು ಉಪಶಮನವಾಗುತ್ತೆ.
• ರಕ್ತವನ್ನು ಹೆಪ್ಪುಗಟ್ಟಿಸುವ ಆಜೋನ ಎಂಬ ರೋಗ ನಿರೋಧಕ ಬೆಳ್ಳುಳ್ಳಿಯಲ್ಲಿದೆ.
Like us on Facebook The New India Times
POPULAR STORIES :
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!