ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಕಲೇಶಪುರ-ಶಿರಾಡಿಘಾಟ್ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಮತ್ತೆ ಆರಂಭಗೊಳ್ಳಲಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಬಂದ್‍ಗೆ ಈಗಾಗಲೇ ಪೂರ್ವ ತಯಾರಿ ನಡೆಸಲಾಗುತ್ತಿದೆ. ಹೆದ್ದಾರಿಯ ಸುಮಾರು 250 ಕಿ.ಮೀ ನಿಂದ 263ಕಿ.ಮೀ ವರೆಗೆ ರಸ್ತೆ ಕಾಂಕ್ರೀಟಿಕರಣ, ಸುಮಾರು 70 ಮೋರಿ ದುರಸ್ಥಿ ಮತ್ತು ಮೂರು ಸೇತುವೆ ನಿರ್ಮಾಣ ಕಾಮಗಾರಿಗಾಗಿ 90.30 ಕೋಟಿ ಹಣ 2015ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾಮಗಾರಿಯ ಸಂಪೂರ್ಣ ಕೆಲಸವನ್ನು ಚೆನ್ನೈನ ಜಿವಿಆರ್ ಕಂಪನಿಗೆ ವಹಿಸಿಕೊಡಲಾಗಿದೆ.
ಈ ಕಂಪನಿಗೆ ಕಳೆದ ಡೆಸೆಂಬರ್ 2015ರಿಂದಲೇ ಕಾಮಗಾರಿ ನಡೆಸಬೇಕು ಎಂದು ಆದೇಶ ಹೊರಡಿಸಿದ್ದಾದರೂ ಕಂಪನಿ 18 ತಿಂಗಳ ಗಡುವು ನೀಡಬೇಕು ಎಂದು ಸೂಚಿಸಿತ್ತು. ಆ ಮೇರೆಗೆ ಕಾಮಗಾರಿ ಕೆಲಸ ಕೆಲವು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಆದರೆ ಜೂನ್ 2017ರ ಒಳಗಾಗಿ ಕಾಂಕ್ರೀಟ್ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗಾಗಿ ಅವಕಾಶ ನೀಡಬೇಕು ಎಂದು ಕರಾರು ವಿಧಿಸಿರುವ ಹಿನ್ನೆಲೆಯಲ್ಲಿ ಶಿರಾಡಿ ಗಾಟ್ ಕಾಂಕ್ರೀಟ್ ನಿರ್ಮಾಣ ಕಾಮಗಾರಿಗಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ. ಆರಂಭಿಕ ಹಂತದ ಕಾಮಗಾರಿಗಾಗಿ ಕಂಪನಿ ಈಗಾಗಲೇ 20 ಹಾಗೂ 26 ಮಿ.ಮೀ 33380 ಕ್ಯೂಬಿಕ್ ಮೀಟರ್ ಜೆಲ್ಲಿಯಲ್ಲಿ 19,046 ಕ್ಯೂಬಿಕ್ ಮೀಟರ್ ಜೆಲ್ಲಿ ಸಂಗ್ರಹ ಮಾಡಿದ್ದರೆ, 40 ಎಂ.ಎಂನ 540 ಕ್ಯೂಬಿಕ್ ಮೀಟರ್ ಜೆಲ್ಲಿ ಸಂಗ್ರಹಿಸಲಾಗಿದೆ. 10 ಎಂ.ಎಂ 11184 ಕ್ಯೂಬಿಕ್ ಮೀಟರ್ ಜಲ್ಲಿಯನ್ನೂ ಕೂಡ ಕಾಮಗಾರಿಗೆ ತರಲಾಗಿದೆ.
ಇನ್ನು ಕಾಂಕ್ರೀಟ್ ಕಾಮಗಾರಿಗಾಗಿ ಒಟ್ಟು 27180 ಕ್ಯೂಬಿಕ್ ಮೀಟರ್ ಮರಳಿನ ಅವಶ್ಯಕತೆ ಇದ್ದು ಅದರಲ್ಲಿ ಪ್ರಾರಂಭಿಕ ಹಂತಕ್ಕಾಗಿ ಒಟ್ಟು 9900 ಕ್ಯೂಬಿಕ್ ಮೀಟರ್ ಮರಳನ್ನು ಸಂಗ್ರಹಿಸಲಾಗಿದೆ. ಕಾಂಕ್ರೀಟೀಕರಣಕ್ಕಾರಿ 60 ಹಾಗೂ 30 ಮೀ ಕ್ಯೂಬಿಕ್ ಸಾಮಥ್ರ್ಯದ ಎರಡು ಕಾಂಕ್ರೀಟಿಕರಣದ ಪ್ಲಾಟ್ ನಿರ್ಮಾಣ ಕಾಮಗಾರಿಯೂ ಕೂಡ ಇದೀಗ ಬರದಿಂದ ಸಾಗ್ತಾ ಇದೆ.
ಶಿರಾಡಿ ಘಾಟ್ ಬದಲೀ ರಸ್ತೆ:
ಇನ್ನು ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯಿಂದ ಈ ಮಾರ್ಗ ಸಂಪೂರ್ಣ ಬಂದ್ ಆಗಲಿರುವ ಹಿನ್ನಲೆಯಲ್ಲಿ ಬದಲೀ ಮಾರ್ಗವನ್ನು ಮಾರ್ಪಾಟು ಮಾಡುವ ಕುರಿತು ಕಳೆದ ಸೆ. 26ರಂದು ಹೆದ್ದಾರಿ ಇಲಾಖೆ ಕಮಿಷನ್ ಕಛೇರಿಯಲ್ಲಿ ಮೊದಲ ಸಭೆ ನಡೆಸಿ ಈ ಸಂಬಂಧ ಬೆಂಗಳೂರಿಗೆ ತಲುಪಲು ಒಟ್ಟು 7 ಬದಲೀ ರಸ್ತೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಲೋಕೋಪಯೋಗಿ ಇಲಾಖೆ ಅಧೀನಕ್ಕೆ ಬರುವ ರಸ್ತೆಗಳಾಗಿದ್ದು, ಅವುಗಳ ಗುಂಡಿ ಮುಚ್ಚುವ ಕಾರ್ಯವನ್ನು ಈಗಾಗಲೇ ಮಾಡಲಾಗ್ತಾ ಇದೆ. ಈ ಮಾರ್ಗಗಳ ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣವಾದೊಡನೆಯೇ ಕಾಂಕ್ರೀಟ್ ಕಾಮಗಾರಿಯ ದಿನಾಂಕವನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದು ಈ ತಿಂಗಳ ಅಂತ್ಯದಲ್ಲೂ ಬಂದ್ ಆಗುವ ಎಲ್ಲಾ ಸಾದ್ಯತೆಗಳು ಇದೆ.
ಬದಲೀ ರಸ್ತೆಗಳು ಎಲ್ಲೆಲ್ಲಿ..?
• ಸಕಲೇಶಪುರದಿಂದ ಮಂಗಳೂರಿಗೆ ತಲುಪುವ ಕಾನುಬಾಳ್-ಮೂಡಿಗೆರೆ-ಚಾರ್ಮಡಿ ಘಾಟ್-ಮಂಗಳೂರು.
• ಅರೇಹಳ್ಳಿ-ಬೇಲೂರು-ಚಾರ್ಮಡಿಘಾಟ್ ಮೂಲಕ ಬೇಲೂರು ತಾಲ್ಲೂಕಿನ ಜನರು ಮಂಗಳೂರಿಗೆ.
• ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ-ಮಡಿಕೇರಿ- ಮೂಲಕ ಮೈಸೂರ್, ಬೆಂಗಳೂರು.
• ಹಾಸನ-ಕೆಆರ್‍ನಗರ-ಕುಶಾಲ್‍ನಗರ ಮೂಲಕ ಮೈಸೂರು, ಬೆಂಗಳೂರು
• ಮಂಗಳೂರಿಂದ ಉಡುಪಿ-ಬೈಂದೂರು, ಬಾಳೆಬರೆಘಾಟ್, ಮಾಸ್ತಿಕಟ್ಟೆ, ಆಯನೂರು, ಶಿವಮೊಗ್ಗ ಮಾರ್ಗದಿಂದ ಬೆಂಗಳೂರಿಗೆ.
• ಹೊನ್ನಾವರ-ಶಿವಮೊಗ್ಗ-ಆಯನೂರು ಬದಲೀ ರಸ್ತೆ.
• ಉಡುಪಿ-ಕಾರ್ಕಳ-ಕುದುರೇಮುಖ-ಮೂಡಿಗೆರೆ ಮಾರ್ಗವಾಗಿ ಬೆಂಗಳೂರು.
POPULAR STORIES :
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!