ಶಾಲೆ ಎಂದಾಕ್ಷಣ ಮೊದಲಿಗೆ ನೆನಪು ಬರೋದು ನಮ್ಮ ಸಹಪಾಠಿಗಳು,ಅಧ್ಯಾಪಕರುಗಳು.. ಅವರಿಂದ ಗಿಟ್ಟಿಸಿದ ಶಹಬ್ಬಾಸ್ ಗಿರಿಗೆ ಹಿಗ್ಗುತ್ತಿದ್ದಂತೆ,ಇತ್ತ ಕಡೆ ಮಾಡುತ್ತಿದ್ದ ಸಣ್ಣ ಪುಟ್ಟ ಮಸ್ತಿ ಮಜಾಕುಗಳಿಗೆ ತಿಂದ ಪೆಟ್ಟೆಷ್ಟೋ, ಕೇಳಿದ ಬೈಗುಳಗಳೆಷ್ಟೋ, ಅದರಲ್ಲೂ ನಾಗರ ಬೆತ್ತದ ಪೆಟ್ಟೂ ಅಬ್ಬಬ್ಬಾ ನೆನ್ಸಿದ್ರೇನೇ ಈಗ್ಲೂ ಕೈ ಉರಿಯುತ್ತೆ,ಇದು ನಮ್ಮಂತಹವರ ಕಥೆಯಾದ್ರೆ ಇನ್ನೂ ಕೆಲವ್ರು ಸರ್ ಕೈಯ ಬೆತ್ತ ನೋಡುತ್ತಿದ್ದಂತೆ ಹೆದರಿ ನಿಂತಲ್ಲೇ ಒದ್ದೆ ಮಾಡ್ಕೊಂಡವ್ರೂ ಇದ್ರು. ಕಾಲ ಕ್ರಮೇಣ ಈ ಶಿಕ್ಷೆಗಳೆಲ್ಲ ಈಗ ಹೇಳ ಹೆಸರಿಲ್ಲದಂತಾಗಿವೆ, ಮಕ್ಕಳು ಅಧ್ಯಾಪಕರಿಗೆ ಹೆದರುವ ಬದಲು ಗುರುಗಳೇ ಮಕ್ಕಳಿಗೆ ಶಿಕ್ಷಿಸಲೂ ಹೆದರುವಂತಾಗಿದೆ. ನಿಜ! ಇಂದಿನ ಮಕ್ಕಳನ್ನು ತಿದ್ದಿ ಬುದ್ದಿ ಹೇಳಿ ಸರಿಯಾದ ಹಾದಿಗೆ ತರಲು ಸಣ್ಣ ಪುಟ್ಟ ಶಿಕ್ಷೆಯಾದ್ರೂ ಬೇಕೆ ಬೇಕು ಕಣ್ರಿ! ಇದಕ್ಕೆ ಅಂತಾನೇ, ಈ ನಿಟ್ಟಿನಲ್ಲಿ ಪಣ ತೊಟ್ಟು ನಿಂತವ್ರು ಅಮೇರಿಕಾದ ಬಾಲ್ಟಿಮೋರ್ ನಲ್ಲಿರೋ ರೋಬರ್ಟ್ ಕೋಲ್ ಮಾನ್ ಎಲಿಮೆಂಟರಿ ಶಾಲೆ. ಹೌದು! ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷೆ ನೀಡಲಾಗುತ್ತದೆ ಆದರೆ ಅದು ಯಾವ ರೂಪದಲ್ಲಿ ಗೊತ್ತೇ?? ಇಲ್ಲಿ ತಪ್ಪು ಮಾಡಿರೋ ಮಕ್ಕಳಿಗೆ ಪ್ರಿನ್ಸಿಪಾಲ್ ಬಳಿಗೂ ಕರೆದೊಯ್ಯಲಾಗುವುದಿಲ್ಲ, ಕ್ಲಾಸಿನಿಂದ ಹೊರಗಡೇಯೂ ನಿಲ್ಲಿಸಲಾಗುವುದಿಲ್ಲ ಬದಲಾಗಿ ಅವರಿಗೆ ಮೆಡಿಟೇಷನ್ ಎಂಬ ಹೊಸ ಶಿಕ್ಷೆಯನ್ನು ನೀಡಲಾಗುತ್ತದೆ.
ಈ ಬಾಲ್ಟಿಮೋರ್ ಶಾಲೆಯಲ್ಲಿ ಮೈಂಡ್ ಫುಲ್ ಮೊಮೆಂಟ್ ರೂಂ ಎಂಬ ವಿಶೇಷ ವಿನ್ಯಾಸದಲ್ಲಿ ರಚಿಸಲಾದ ಕೊಠಡಿಯಿದ್ದು, ಇಲ್ಲಿ ಸುಂದರವಾಗಿ ಅಲಂಕರಿಸಲಾದ ದೀಪಗಳು ಹಾಗೂ ಮಂದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ನೇರಳೆ ಬಣ್ಣದ ದಿಂಬುಗಳು ಇವೆ. ಯಾವುದೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದಲ್ಲಿ, ಅವರನ್ನು ಆ ಕೊಠಡಿಗೆ ತೆರಳುವಂತೆ ಹೇಳಲಾಗುತ್ತದೆ, ಆ ಬಳಿಕ ಅವರಿಗೆ ಕಣ್ಣುಗಳನ್ನು ಮುಚ್ಚಿ, ದೀರ್ಘ ಉಸಿರಾಡುತ್ತಾ ಈ ತರಹದ ಕೆಲವೊಂದು ವ್ಯಾಯಾಮಗಳನ್ನು ಮಾಡುವಂತೆ ನಿರ್ದೇಶನ ನೀಡಲಾಗುತ್ತದೆ. ಇದು ಅವರನ್ನು ಶಾಂತವಾಗಿರಿಸುವುದಲ್ಲದೆ, ಅವರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.
ಮೆಡಿಟೇಷನ್ ನಮ್ಮ ದೇಹ ಹಾಗೂ ಮನಸ್ಸನ್ನು ಶಾಂತವಾಗಿರಿಸುತ್ತದೆ ಎಂಬುದು ವೈಜ್ಣಾನಿಕವಾಗಿ ಸಾಬೀತಾಗಿರೋ ವಿಷಯವೂ ಹೌದು. ಕ್ರಮಬದ್ದವಾಗಿ ಯಾವನು ಮೆಡಿಟೇಷನ್ ಮಾಡುತ್ತಾನೋ ಅವನ ಸ್ವಭಾವದಲ್ಲಿ ಕ್ರಮೇಣ ಬದಲಾವಣೆಯನ್ನು ಕಾಣಬಹುದು ಹಾಗೂ ಇದು ನಮ್ಮ ಭಾವನೆಯನ್ನು ನಿಯಂತ್ರಣದಲ್ಲಿಡುತ್ತದೆ.ಇದು ವ್ಯಕ್ತ್ಗಿಯ ಗಮನವನ್ನು ಕೇಂದ್ರೀಕರಿಸುವುದಲ್ಲದೆ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದಂತೆ.
ಈ ಶಾಲೆಯು ಹೋಲಿಸ್ಟಿಕ್ ಲೈಫ಼್ ಫೌಂಡೇಷನ್ ಎಂಬ ಎನ್.ಜಿ.ಒ ಜೊತೆ ಸೇರಿಕೊಂಡಿದ್ದು,ಹೆಚ್ಚಿನ ವಿದ್ಯಾರ್ಥಿಗಳನ್ನು ಇದರತ್ತ ಸೆಳೆಯಲು, ಪಠ್ಯೇತರ ಚಟುವಟಿಕೆಗಳಾದ ಯೋಗ ಹಾಗೂ ಧ್ಯಾನವನ್ನೊಳಗೊಂಡ “ಹೋಲಿಸ್ಟಿಕ್ ಮೀ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಇದರ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಯೋಗ ಹಾಗೂ ಧ್ಯಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಈ ಶಾಲೆಯು ಈ ಕಾರ್ಯಕ್ರಮದ ಲಾಭವನ್ನು ಈಗಾಗಲೇ ಮನಗಂಡಿದ್ದು,ಪುಟ್ಟ ಪುಟಾಣಿ ಮಕ್ಕಳೂ ತೀರಾ ನಿಶ್ಯಬ್ದ ಜಾಗದಲ್ಲಿ ಧ್ಯಾನ ಮಾಡುತ್ತಾರೆ ಎಂಬುದೊಂದು ಅದ್ಭುತವಾದ ವಿಷಯ ಎಂದು ಸಾರಿದೆ.ಈ ಸಾಧನೆಯನ್ನು ನೋಡಿದ ಇನ್ನೂ ಅನೇಕ ಶಾಲೆಗಳು ತಮ್ಮಲ್ಲೂ ಇದೇ ತರಹದ ಕ್ರಮವನ್ನು ಅನುಸರಿಸಲು ತಯಾರಿ ನಡೆಸುತ್ತಿದೆ.
ನಿಜಕ್ಕೂ ಈ ಶಾಲೆಯ ಈ ಸಾಧನೆ ಶ್ಲಾಘನೀಯವಲ್ಲವೇ..ಏನಂತೀರಾ??
- ಸ್ವರ್ಣಲತ ಭಟ್
POPULAR STORIES :
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!