ನಾಳೆ ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ: ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿರೋ ಆರೋಪಿಗಳು
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ಇದರ ನಡುವೆ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 11 ದಿನಗಳು ಆಗುತ್ತಿವೆ. ನಟ ದರ್ಶನ್ ಹಾಗೂ ಅವರ ಸಂಗಡಿಗರ ನ್ಯಾಯಾಂಗ ಬಂಧನದ ಅವಧಿ ಸೆ. 9ರಂದು ಮುಕ್ತಾಯವಾಗಲಿದೆ. ಆ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆರೋಪಿಗಳೀಗ ಬೇರೆ ಬೇರೆ ಜೈಲುಗಳಲ್ಲಿದ್ದು ಅವರನ್ನು ಅವರು ಇರುವ ಜಾಗದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳ ಪಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಈಗಾಗಲೇ ದರ್ಶನ್ ಬೇಲ್ ವಿಚಾರವಾಗಿ ದರ್ಶನ್, ಪತ್ನಿ ಹಾಗೂ ಸಹೋದರ ದಿನಕರ್ ಜೊತೆ ಚರ್ಚೆ ಮಾಡಿದ್ದಾರೆ. ಇತ್ತೀಚೆಗೆ ಬಳ್ಳಾರಿ ಜೈಲಿಗೆ ಕುಟುಂಬ ಭೇಟಿ ನೀಡಿದ ಸಂದರ್ಭದಲ್ಲಿ ಚಾರ್ಜ್ಶೀಟ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳ್ಳಾರಿ ಜೈಲಿನಲ್ಲಿಯೇ ದರ್ಶನ್ ಜಾಮೀನು ಅರ್ಜಿಗೆ ಸಹಿ ಮಾಡಿದ್ದಾರೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಲು ವಕೀಲರು ಸಕಲ ಸಿದ್ಧತೆ ಮಾಡಿಕೊಂಡಿದ್ದು. ಎಸಿಎಂಎಂ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.