ಬೆಳ್ಳಂ ಬೆಳಗ್ಗೆ ಸುದ್ದಿಯಾದ ಡಿಂಪಲ್ ಕ್ವೀನ್: ಇನ್ಸ್ಟಾದ ಅದೊಂದು ಪೋಸ್ಟ್ ಭಾರೀ ವೈರಲ್!
ರಚಿತಾ ರಾಮ್. ಈ ಬ್ಯೂಟಿ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಬಂದ ಇವರು ಸಾಲು ಸಾಲು ಹಿಟ್ ಮೂವಿ ಕೊಟ್ಟಿದ್ದಾರೆ.
ಇಂತಹ ಸ್ಟಾರ್ ನಟಿ ರಚಿತಾ ರಾಮ್ ಅವರು ಬೆಳ್ಳಂ ಬೆಳಗ್ಗೆ ಮಾಡಿರೋ ಪೋಸ್ಟ್ ಒಂದು ಸಖತ್ ವೈರಲ್ ಆಗಿ ಗಮನ ಸೆಳೆದೆ. ಮುಖವಾಡ ಹಾಕಿದ ಜನರು ವರ್ಚಸ್ಸನ್ನು ಕಾಯ್ದುಕೊಳ್ಳಬೇಕು. ಆದರೆ, ನಿಜವಾದವರು ಡೋಂಟ್ ಕೇರ್ ಎನ್ನುತ್ತಾರೆ’ ಎಂಬರ್ಥ ಬರುವಂತೆ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆದಿದೆ.
ರಚಿತಾ ರಾಮ್ ಅವರು ಮಾಡಿರೋ ಪೋಸ್ಟ್ ಗಮನ ಸೆಳೆಯುತ್ತಿದೆ. ಅವರು ಹೀಗೆ ಹೇಳಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಈ ಮೊದಲು ರಚಿತಾ ರಾಮ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಆ ಬಳಿಕ ಅವರು ಕಣ್ಣೀರು ಹಾಕಿದ್ದರು. ಈ ವಿಚಾರಕ್ಕೆ ಕೆಲವರು ಅವರನ್ನು ಟೀಕೆ ಕೂಡ ಮಾಡಿದ್ದರು.
ಸದ್ಯ ರಚಿತಾ ರಾಮ್ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಝೈದ್ ಖಾನ್ ನಟನೆಯ ಹೊಸ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ.