ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ: ರೌಡಿ ಶೀಟರ್ ನಾಗನ ಮೊಬೈಲ್ ಸೀಜ್!

Date:

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ: ರೌಡಿ ಶೀಟರ್ ನಾಗನ ಮೊಬೈಲ್ ಸೀಜ್!

ಬೆಂಗಳೂರು:- ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ ಮಾಡಿದ್ದು,ರೌಡಿ ಶೀಟರ್ ನಾಗನ ಮೊಬೈಲ್ ಸೀಜ್ ಮಾಡಿದ್ದಾರೆ.

ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಜೈಲಿನ ಮೇಲೆ ನಿನ್ನೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ವಿಲ್ಸನ್ ಗಾರ್ಡನ್ ನಾಗನ ಬಳಿ ಇದ್ದ ಮೊಬೈಲ್ ಸೇರಿದಂತೆ ಸುಮಾರು 18 ಮೊಬೈಲ್ ಸೀಜ್ ಆಗಿದೆ. ಇಷ್ಟಲ್ಲದೇ ಡ್ರಗ್ಸ್ ಮತ್ತು ಹಣ ಕೂಡ ಸಿಕ್ಕಿದೆ.

ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲೇ ಕೂತ ಹೊರಗಡೆಯ ವ್ಯಕ್ತಿಗಳ ಧಮ್ಕಿ ಹಾಕಿ ಹಣ ವಸೂಲಿ ಮಾಡ್ತಿದ್ದ ಆರೋಪ ಇತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಆತನ ಮೊಬೈಲ್ ಸೀಜ್ ಮಾಡಿದ್ದಾರೆ. ಈಗಾಗಲೇ ದರ್ಶನ್ ಜೊತೆ ನಾಗ ಕ್ಲೋಸ್ ಆಗಿ ಇದ್ದಿದ್ದು ಜಗಜ್ಜಾಹಿರವಾಗಿತ್ತು. ಇದರ ಬೆನ್ನಲ್ಲೆ ಆತನ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಟೀಂ, ಆತನ ಮೊಬೈಲ್ ಸೀಜ್ ಮಾಡಿ ಮತ್ತೆ ಈ ರೀತಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ.

ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್​ಗಳು, ಏಳು ಎಲೆಕ್ಟ್ರಿಕ್ ಸ್ಟವ್‌ಗಳು, ಐದು ಚಾಕುಗಳು, ಮೂರು ಮೊಬೈಲ್ ಫೋನ್ ಚಾರ್ಜರ್‌ಗಳು, ಎರಡು ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಇನ್ನು ಮತ್ತೊಂದು ಕಡೆ ರಾಜಾತಿಥ್ಯ ನೀಡಿದ ಸಂಬಂಧ ಜೈಲಿನ ಅಧಿಕಾರಿಗಳು ವಿಚಾರಣೆ ಎದುರಿಸಿದ್ದಾರೆ. ಆದರೆ ವಿಚಾರಣೆ ವೇಳೆ ಜೈಲಿನ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡ್ತಿಲ್ಲ. ದರ್ಶನ್ ಬ್ಯಾರಕ್ ಬಳಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿ ಮಾಹಿತಿ ನೀಡಿ ಎಂದು ಎರಡ್ಮೂರು ಬಾರಿ ಕೇಳಿದ್ರೂ ಮಾಹಿತಿ ನೀಡಿಲ್ಲ. ಯಾಕೆಂದ್ರೆ ಜೈಲು ಅಧಿಕಾರಿಗಳು ಸಿಬ್ಬಂದಿ ನಿಯೋಜನೆಯ ಡೈರಿ ಮೆಂಟೈನ್ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...