ವೃದ್ದೆ ಜೀವ ಉಳಿಸಲು ಹೋಗಿ ತನ್ನ ಪ್ರಾಣ ಅರ್ಪಿಸಿದ ಯಕೃತ್ ದಾನಿ ಮಹಿಳೆ!
ಉಡುಪಿ:- ವೃದ್ದೆ ಜೀವ ಉಳಿಸಲು ಹೋಗಿ ಮಹಿಳೆಯೋರ್ವರು ತನ್ನ ಪ್ರಾಣ ಅರ್ಪಿಸಿದ ಘಟನೆ ಜರುಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ಘಟನೆ ಜರುಗಿದೆ.
ಅರ್ಚನಾ ಕಾಮತ್ ಮೃತಪಟ್ಟವರು. 69 ವರ್ಷ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ತಮ್ಮ ಯಕೃತ್‌ನ ಒಂದು ಭಾಗವನ್ನು ಪತಿಯ ಸಂಬಂಧಿಗೆ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ. ಅಕಾಲಿಕ ನಿಧನದಿಂದ ಅರ್ಚನಾ ಅವರ ಸಂಬಂಧಿಕರು, ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.