ಆ ನಿಮ್ಮ ಕಿರಿಕ್ ವರ್ತನೆ ಮೊದಲು ನಿಲ್ಲಿಸಿ; ದರ್ಶನ್ ಗೆ ವಕೀಲರ ಚಾಟಿ!
ಕೊಲೆ ಆರೋಪಿ ನಟ ದರ್ಶನ್ ಎಲ್ಲೋದ್ರೂ ವಿವಾದವನ್ನು ಜೊತೆಯಲ್ಲೇ ಕರೆದುಕೊಂಡು ಹೋಗ್ತಾರೆ. ಬೆಂಗಳೂರು ಬಳಿಕ ಬಳ್ಳಾರಿಯಲ್ಲೂ ಅವರು ವಿವಾದ ಮಾಡಿಕೊಂಡಿದ್ದಾರೆ. ಅವರು ಮಾಧ್ಯಮಗಳಿಗೆ ಅಶ್ಲೀಲ ಸನ್ನೆ ತೋರಿಸಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಅವರಿಗೆ ವಕೀಲರಿಂದ ಕಿವಿಮಾತು ಬಂದಿದೆ.
ಪ್ರಕರಣದಲ್ಲಿ ಈವರೆಗೆ ದರ್ಶನ್ ಪರ ವಕೀಲರು ಜಾಮೀನು ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಜಾಮೀನು ಅರ್ಜಿ ಸಲ್ಲಿಕೆ ಆಗಿದ್ದೇ ಹೌದಾದಲ್ಲಿ ದರ್ಶನ್ ಕಾಂಟ್ರವರ್ಸಿ ವಿಚಾರಗಳು ಹೈಲೈಟ್ ಆಗುವ ಸಾಧ್ಯತೆ ಇರುತ್ತದೆ. ಅದುವೇ ದರ್ಶನ್ ಜಾಮೀನಿಗೆ ತೊಂದರೆ ಮಾಡಬಹುದು. ಈ ಕಾರಣಕ್ಕೆ ಅವರ ಪರ ವಕೀಲರು ದರ್ಶನ್ಗೆ ಕಿವಿಮಾತು ಹೇಳಿದ್ದಾರೆ
ಜೈಲಿನಲ್ಲಿ ವಿವಾದ ಮಾಡಿಕೊಳ್ಳಬೇಡಿ. ಪದೇಪದೆ ಕಿರಿಕ್ ಮಾಡಿಕೊಂಡರೆ ಜಾಮೀನಿಗೆ ಸಮಸ್ಯೆ ಆಗುತ್ತದೆ. ಕಾನೂನು ಹೋರಾಟಕ್ಕೆ ತೊಡಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಂಡು ದರ್ಶನ್ ದುರ್ನಡತೆ ತೋರಿದ್ದರು. ಅಲ್ಲದೇ ಟಿವಿಗಾಗಿ ಸಿಬ್ಬಂದಿ ಜತೆ ಪದೇಪದೇ ಕಿರಿಕ್ ಆಗುತ್ತಿತ್ತು. ಸದ್ಯ ಜೈಲಿಗೆ ಬಂದ ಪತ್ರವನ್ನು ಸಿಬ್ಬಂದಿ ದರ್ಶನ್ಗೆ ನೀಡಿದ್ದಾರೆ.