ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಆರೋಪ: ತಿರುಪತಿ ದೇವಸ್ಥಾನದಲ್ಲಿ ಶುದ್ಧೀಕರಣ ಹೋಮ
ಆಂದ್ರ: ಪ್ರಸಿದ್ಧ ತಿರುಪತಿ ತಿರುಮಲ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣದ ತುಪ್ಪ ಬಳಕೆ ಮಾಡಿರುವುದು ಈಗಾಗಲೇ ಎಫ್ಎಸ್ಎಲ್ ವರದಿಯಲ್ಲಿ ದೃಢವಾಗಿದ್ದು, ಈ ಬಗ್ಗೆ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇನ್ನೊಂದೆಡೆ ಲಡ್ಡು ಖರೀದಿ ಬಗ್ಗೆ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಇದರ ಮಧ್ಯ ತಿರುಪತಿ ದೇವಸ್ಥಾನದಲ್ಲಿ ಶುದ್ಧೀಕರಣ ಹೋಮ ನಡೆದಿದೆ.
ತಿರುಪತಿ ತಿರುಮಲ ಆಡಳಿತ ಮಂಡಳಿಯು ರಾಮಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ನಡೆದ ಹೋಮ ನಡೆದಿದೆ. ತಿಮ್ಮಪ್ಪನ ಭಕ್ತರಲ್ಲಿ ನಂಬಿಕೆ ಮೂಡಿಸಲು, ಬಂಗಾರು ಬಾವಿ ಯಾಗ ಶಾಲೆಯಲ್ಲಿ ಹೋಮ ನಡೆದಿದೆ.
ವಾಸ್ತು ಶುದ್ಧಿ, ಯಂತ್ರ ಶುದ್ಧಿ, ಸ್ಥಳ ಶುದ್ಧಿ , ಪಂಚಗವ್ಯ ಸಂಪ್ರೋಕ್ಷಣ ಮೂಲಕ, ಅನ್ನ ಪ್ರಸಾದ ತಯಾರಾಗುವ ಸ್ಥಳ, ಲಡ್ಡು ತಯಾರಾಗುವ ಸ್ಥಳ, ತುಪ್ಪ ಬಳಸುತ್ತಿದ್ದ ಎಲ್ಲಾ ಸ್ಥಳಗಳಲ್ಲಿ ಪಂಚಗವ್ಯ ಸಂಪ್ರೋಕ್ಷಣೆ ನಡೆಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.