No menu items!
17.7 C
Munich
Friday, May 1, 2026

ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

Must read

Anushka Shetty: ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

ಸೌತ್ ಇಂಡಿಯಾದ ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ನಟಿ ಅವರ ಮದುವೆ ವಿಚಾರ ಆಗಾಗ್ಗೆ ಚರ್ಚೆಗೆ ಬಂದು ಮತ್ತೆ ಮರೆಯಾಗುತ್ತಿದ್ದದ್ದು ಗೊತ್ತೇ ಇದೆ. ಇದೀಗ ಮತ್ತೆ ಅವರ ವಿವಾಹದ ವಿಚಾರ ಜೋರಾಗಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ, ಇದೇ ವರ್ಷ ಅನುಷ್ಕಾ ಶೆಟ್ಟಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಅವರು ಕೈ ಹಿಡಿಯಲಿರುವವರು ಚಿತ್ರರಂಗದವರಲ್ಲ, ಬದಲಾಗಿ ಯಶಸ್ವಿ ಉದ್ಯಮಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಶೇಷವೆಂದರೆ, ಈ ಉದ್ಯಮಿ ಅನುಷ್ಕಾ ಅವರ ಕುಟುಂಬಕ್ಕೆ ತುಂಬಾ ಆಪ್ತರು ಎನ್ನಲಾಗುತ್ತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದ ಖ್ಯಾತ ನಟಿ, ‘ದೇವಸೇನಾ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ಅನುಷ್ಕಾ ಶೆಟ್ಟಿಯವರ ಮದುವೆ ವಿಚಾರ ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈಗ ಆ ಕುತೂಹಲಕ್ಕೆ ಅಂತ್ಯ ಸಿಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಅನುಷ್ಕಾ ಶೆಟ್ಟಿ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಡುವೆ ಪ್ರೀತಿ ಇದೆ ಎಂಬ ವದಂತಿಗಳು ದಶಕಗಳಿಂದ ಕೇಳಿಬರುತ್ತಿದ್ದವು. ವಿಶೇಷವಾಗಿ ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರಗಳ ನಂತರ ಈ ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ಆಶೆಯಾಗಿತ್ತು.

ಆದರೆ ಈಗ ಅನುಷ್ಕಾ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದ ಹಿನ್ನೆಲೆ ಕೆಲ ಅಭಿಮಾನಿಗಳಲ್ಲಿ ತುಸು ಬೇಸರ ಮೂಡಿದರೂ, ನೆಚ್ಚಿನ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article