ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿ ಅರೆಸ್ಟ್!
ಬೆಂಗಳೂರು: ರಾಜಗೋಪಾಲನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 14 ಲಕ್ಷ ಮೌಲ್ಯದ 245 ಗ್ರಾಂ ಚಿನ್ನಾಭರಣ 1 ಬೈಕ್ ವಶಕ್ಕೆ ಪಡೆದಿದ್ದಾರೆ. ಪೀಣ್ಯಾ 2 ನೇ ಹಂತದ ಫ್ಯಾಕ್ಟರಿಯಲ್ಲಿ ಮಹಡಿಯ ಶೈಟ್ ಕಟ್ ಮಾಡಿ ಒಳಗೆ ಪ್ರವೇಶಿಸಿ ಕೈ ಚಳಕ ತೋರಿದ್ದನು. ಫ್ಯಾಕ್ಟರಿಯಲ್ಲಿ ಲ್ಯಾಪ್ ಟಾಪ್ 55 ಸಾವಿರ ನಗದು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.