ರಾಜಕೀಯ ಆರೋಪಗಳ ಮೂಲಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ
ನವದೆಹಲಿ: ರಾಜಕೀಯ ಆರೋಪಗಳ ಮೂಲಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಆರೋಪಗಳ ಮೂಲಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ರಾಜಕೀಯ ಪ್ರೇರಿತ ಕೇಸ್ನಲ್ಲಿ ನಿರಪರಾಧಿಗಳನ್ನು ಅಪರಾಧಿ ಮಾಡಲು ಸಾಧ್ಯವಿಲ್ಲ. ನನ್ನ ಅಧಿಕಾರ ದುರಪಯೋಗಪಡಿಸಿಕೊಂಡಿಲ್ಲ, ಅಧಿಕಾರಿಗಳನ್ನು ಬೆದರಿಸಿಲ್ಲ.
ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ಗೆ ಸಂಬಂಧಿಸಿದಂತೆ ಅಲ್ಲ. ರಾಜ್ಯಪಾಲರ ವಿಚಾರವಾಗಿ ಅಧಿಕಾರಿಯನ್ನು ನಾನು ಪ್ರಶ್ನೆ ಮಾಡಿದ್ದೇನೆ. ರಾಜ್ಯಪಾಲರ ಕಚೇರಿಗೆ ಪತ್ರ ಬರೆದು ಅವಮಾನ ಮಾಡಿದ್ದ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದೇನೆ. ನನ್ನ ಇತಿಮಿತಿಗಳು ಏನು ಅನ್ನುವುದು ನನಗೂ ಗೊತ್ತಿದೆ. ಅಧಿಕಾರಿಯ ಉದ್ಧಟತನವನ್ನು ಪ್ರಶ್ನೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.