ಜಮ್ಮು ಕಾಶ್ಮೀರದಲ್ಲಿ ಸಪ್ಟಂಬರ್ 18 ರಂದು ನಡೆದ ಆಕ್ರಮಣಗಳಿಂದ ಕೇವಲ ಎರಡು ದೇಶಗಳ ನಡುವಷ್ಟೇ ಅಲ್ಲ,ಬದಲಾಗಿ ದೇಶದೊಳಗೇನೆ ವಿವಾದ ಏಳುತ್ತಿದೆ.ನಿತ್ಯ ಒಂದಲ್ಲ ಒಂದು ವಿಷಯದಿಂದ ಮಾಧ್ಯಮಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಧೂಳೆಬ್ಬಿಸುತ್ತದೆ,ಇಂತಹದ್ದಕ್ಕೇನೇ ಎಡೆಮಾಡಿಕೊಟ್ಟಿರೋದು ಈಗ ಧೀರ ಯೋಧ ಮನೋಜ್ ರವರ ದೇಶ ಪ್ರೇಮದ ವೀಡಿಯೋ…
ಕಾನ್ಸ್ಟೇಬಲ್ ಮನೋಜ್ ರವರು ದೇಶದ ಶತ್ರುಗಳಿಗೆ ಎಚ್ಚರಿಕೆಯಂಬಂತೆ ಈ ವೀಡಿಯೋದಲ್ಲಿ ತನ್ನ ಕವಿತೆಯನ್ನು ಹಾಡಿರುವುದು ಹಾಗೂ ಇದು ಸಿಕ್ಕಾಪಟ್ಟೇ ವೈರಲ್ ಆಗಿರೋದು ನಮಗೆಲ್ಲಾ ತಿಳಿದಿರೋ ವಿಚಾರವೇ ಸರಿ. ಆದ್ರೆ ಇದನ್ನು ನೋಡಿ ಸಹಿಸದ ಕೆಲವು ಮಂದಿಗಳು ಅವರಿಗೆ ಜೀವಬೆದರಿಕೆ ಒಡ್ಡಿದ್ದಾರಂತೆ.ಹೌದು ! ಮನೋಜ್ ಸಿಂಗ್ ರವರ ಪವರ್ ಪುಲ್ ಶಬ್ದಗಳಿಗೆ ಅವರಿಗೆ ಫರ್ಮಾನ್ ಖಾನ್ ಎಂಬವರು ಬೆದರಿಕೆ ಒಡ್ಡಿದ್ದಲ್ಲದೆ,ತನಗೆ ಅವಕಾಶ ಸಿಕ್ಕಿದ್ದಲ್ಲಿ ತನ್ನ ಕೈಯಾರೆ ಮನೋಜ್ ಸಿಂಗ್ ನ ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.ಅವರಿಗೆ ಈತನಿಂದ ಬಂದ ಮೆಸ್ಸೇಜ್ ಹೀಗಿದೆ ನೋಡಿ..
ಇದರಂತೆ ಬಿಲಾಲ್ ಅಹಮದ್ ಎಂಬ ಇನ್ನೊಬ್ಬ ವ್ಯಕ್ತಿಯೂ ಇದೇ ತರಹದ ಮೆಸೇಜ್ ಕಳುಹಿಸಿದ್ದಾನೆ.
ಈ ತರಹದ ಮೆಸೇಜ್ ಭಾರತೀಯರಾದ ನಮಗೆಲ್ಲಾ ಕೋಪ ತರಿಸದಿರುತ್ತದೆಯೇ??
ಇಷ್ಟಕ್ಕೇ ಸುಮ್ಮನಿರದ ಧೈರ್ಯಶಾಲಿ ಮನೋಜ್ ಕುಮಾರ್ ಫ಼ೇಸ್ ಬುಕ್ ನಲ್ಲಿ ತನ್ನ ಅದ್ಭುತ ಮೆಸೇಜ್ ನೀಡಿದ್ದಾರೆ.
ಧೈರ್ಯ ಅಂದ್ರೆ ಇದಪ್ಪ ನೋಡಿ! ಇದಕ್ಕೆ ನೋಡಿ ನಮ್ಮ ಭಾರತೀಯ ಸೈನಿಕರು ಅದೆಷ್ಟು ಧೈರ್ಯಶಾಲಿಗಳು ಅನ್ನೋದು,ಯಾವುದೇ ಡಿಪಾರ್ಟ್ಮೆಂಟ್ ಆಗಿರಲಿ ಎಲ್ಲಾರಿಗೂ ಇರುವುದು ದೇಶದ ಬಗ್ಗೆ ಒಲವು.ಈ ಸಂದೇಶದಿಂದ ಮನೋಜ್,ಯಾವುದೇ ಜೀವ ಭಯಕ್ಕೆ ಅಂಜದೆ, ತನ್ನ ಯೋಚನೆಯನ್ನು ಯಾರೂ ಎಂದೆಂದಿಗೂ ಬದಲಾಯಿಸಲು ಅಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.ನಿಜಕ್ಕೂ ಈತ ಗೌರವಕ್ಕೆ ಅರ್ಹರು.ಅಲ್ಲವೇ???
POPULAR STORIES :
ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!
ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!