ಅಪ್ಪನ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ವಿನೀಶ್ ದರ್ಶನ್!

Date:

ಅಪ್ಪನ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ವಿನೀಶ್ ದರ್ಶನ್!

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ನೂರಕ್ಕೂ ಹೆಚ್ಚು ದಿ‌ನಗಳು ಕಳೆದಿವೆ. ಈಗಲಾದರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ. ಇದರ ಬೆನ್ನಲ್ಲೇ ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ ಮತ್ತು ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಅಪ್ಪನನ್ನು ನೋಡಲು ಬಳ್ಳಾರಿಗೆ ಜೈಲಿಗೆ ವಿನೀಶ್ ಭೇಟಿ ಕೊಟ್ಟಿದ್ದಾನೆ.
ದರ್ಶನ್ ಜೈಲು ಸೇರಿ 3 ತಿಂಗಳಿಗಿಂತ ಅಧಿಕವಾಗಿದೆ. ಕಾನೂನು ಸಮರದ ಕುರಿತು ಚರ್ಚಿಸಲು ಪ್ರತಿ ವಾರ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ಈ ಬಾರಿ ಅಮ್ಮನ ಜೊತೆ ಪುತ್ರ ವಿನೀಶ್ ಕೂಡ ಭೇಟಿ ನೀಡಿದ್ದಾರೆ.
ಈ ವೇಳೆ, ದರ್ಶನ್‌ಗೆ ಅಗತ್ಯವಿರುವ ಬಟ್ಟೆ, ಬೆಡ್‌ಶಿಟ್ ಮತ್ತು ಬೇಕರಿ ತಿನಿಸುಗಳೊಂದಿಗೆ 2 ಬ್ಯಾಗ್ ಹಿಡಿದು ಆಪ್ತರೊಂದಿಗೆ ಪತ್ನಿ, ಪುತ್ರ ಜೈಲಿಗೆ ಆಗಮಿಸಿದ್ದಾರೆ. ಇನ್ನೂ ಬಳ್ಳಾರಿಗೆ ಜೈಲಿಗೆ ಭೇಟಿ ಕೊಟ್ಟ ವೇಳೆ, ಅಪ್ಪ ದರ್ಶನ್‌ರನ್ನು ನೋಡಿ ವಿನೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗನನ್ನು ಸಂತೈಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...