ನವರಾತ್ರಿ 6ನೇ ದಿನ: ಕಾತ್ಯಾಯಿನಿ ದೇವಿಯ ಮಂತ್ರ, ಪೂಜೆ ವಿಧಾನ ತಿಳಿಯಿರಿ!

Date:

ನವರಾತ್ರಿ 6ನೇ ದಿನ: ಕಾತ್ಯಾಯಿನಿ ದೇವಿಯ ಮಂತ್ರ, ಪೂಜೆ ವಿಧಾನ ತಿಳಿಯಿರಿ!

ಮಾ ದುರ್ಗೆಯ 6ನೇ ಶಕ್ತಿ ಕಾತ್ಯಾಯನಿ. ನವರಾತ್ರಿಯ ಆರನೇ ದಿನವಾದ 8 ಅಕ್ಟೋಬರ್ 2024 ರಂದು ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಕಾತ್ಯಾಯನಿಯ ಆರಾಧನೆಯಿಂದ ಕಂಕಣಭಾಗ್ಯ ಮತ್ತು ಬಯಸಿದ ಜೀವನ ಸಂಗಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಾದರೆ ಶಾರದೀಯ ನವರಾತ್ರಿಯ ಆರನೇ ದಿನದಂದು ಮಾ ಕಾತ್ಯಾನಿಯನ್ನು ಪೂಜಿಸಲು ಮಂಗಳಕರ ಸಮಯ, ವಿಧಾನ, ಪರಿಹಾರವನ್ನು ತಿಳಿಯೋಣ.

ಶಾರದೀಯ ನವರಾತ್ರಿಯ 6ನೇ ದಿನದಂದು ತಾಯಿ ಕಾತ್ಯಾಯಿನಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ. ಅಲ್ಲದೆ, ಆಕೆಗಾಗಿ ಉಪವಾಸವನ್ನು ಆಚರಿಸಲಾಗುತ್ತದೆ. ಸನಾತನ ಗ್ರಂಥಗಳಲ್ಲಿ ತಾಯಿ ಕಾತ್ಯಾಯಿನಿಯ ಮಹಿಮೆಯನ್ನು ವಿವರವಾಗಿ ವಿವರಿಸಲಾಗಿದೆ. ತಾಯಿ ಕಾತ್ಯಾಯನಿಯನ್ನು ಆರಾಧಿಸುವುದರಿಂದ ಸಾಧಕನು ಮೃತ್ಯುಲೋಕದಲ್ಲಿ ಸ್ವರ್ಗಸದೃಶ ಸುಖಗಳನ್ನು ಪಡೆಯುತ್ತಾನೆ.

ಆದಾಯ, ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪಡೆದುಕೊಳ್ಳತ್ತಾನೆ. ತಾಯಿ ತನ್ನ ಭಕ್ತರ ಮೇಲೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ. ಆಕೆಯ ಅನುಗ್ರಹದಿಂದ ಸಾಧಕನ ಜೀವನದಲ್ಲಿ ಐಶ್ವರ್ಯವೆಂಬುದು ಮನೆ ಮಾಡಿರುತ್ತದೆ. ಆದ್ದರಿಂದ ಭಕ್ತರು ಕಾತ್ಯಾಯಿನಿ ಮಾತೆಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ನೀವೂ ಸಹ ತಾಯಿ ಕಾತ್ಯಾಯನಿಯ ಆಶೀರ್ವಾದದ ಭಾಗವಾಗಲು ಬಯಸಿದರೆ, ನವರಾತ್ರಿ 2023 ರ 6ನೇ ದಿನ ಕಾತ್ಯಾಯಿನಿ ದೇವಿಯನ್ನು ಹೀಗೆ ಪೂಜಿಸಿ.

ದುರ್ಗಾ ದೇವಿಯ ಅವತಾರಗಳಲ್ಲಿ ಒಂದಾದ ತಾಯಿ ಕಾತ್ಯಾಯಿನಿಯ ರೂಪದ ಬಗ್ಗೆ ಹೇಳುವುದಾದರೆ, ಅವಳು ನಾಲ್ಕು ತೋಳುಗಳನ್ನು ಹೊಂದಿದ್ದು, ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಆಕೆಯು ತನ್ನ ಎರಡು ಕೈಗಳಲ್ಲಿ ಕಮಲ ಮತ್ತು ಖಡ್ಗವನ್ನು ಹಿಡಿದಿದ್ದಾಳೆ. ಇನ್ನೆರೆಡು ಕೈಗಳಲ್ಲಿ ಒಂದು ಕೈಯಲ್ಲಿ ವರ ನೀಡುತ್ತಿರುವ ಭಂಗಿಯಲ್ಲಿ ವರ ಮುದ್ರೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ. ಈಕೆಯನ್ನು ನವರಾತ್ರಿ ಹಬ್ಬದ ಆರನೇ ದಿನದಂದು ಪೂಜಿಸಲಾಗುತ್ತದೆ.

– ಬ್ರಹ್ಮ ಮುಹೂರ್ತ- ಅಕ್ಟೋಬರ್‌ 20 ರಂದು ಮುಂಜಾನೆ 04:44 ರಿಂದ 05:34
– ಬೆಳಿಗ್ಗೆ ಮುಹೂರ್ತ- ಅಕ್ಟೋಬರ್‌ 20 ರಂದು ಮುಂಜಾನೆ 05:09 ರಿಂದ 06:25
– ಅಭಿಜಿತ್ ಮುಹೂರ್ತ- ಅಕ್ಟೋಬರ್‌ 20 ರಂದು ಬೆಳಗ್ಗೆ 11:43 AM ರಿಂದ 12:28
– ವಿಜಯ ಮುಹೂರ್ತ- ಮಧ್ಯಾಹ್ನ 01:59 ರಿಂದ 02:45
– ಮುಸ್ಸಂಜೆ ಸಮಯ- ಸಂಜೆ 05:47 ರಿಂದ 06:12 ರವರೆಗೆ
– ಸಂಧ್ಯಾ ಮುಹೂರ್ತ – ಸಂಜೆ 05:47 ರಿಂದ 07:03
– ಅಮೃತ ಕಾಲ- ಮಧ್ಯಾಹ್ನ 02:23 ರಿಂದ 03:58
– ನಿಶಿತಾ ಮುಹೂರ್ತ- ರಾತ್ರಿ 11:41 ರಿಂದ ಅಕ್ಟೋಬರ್‌ 21 ರಂದು ಮುಂಜಾನೆ 12:31
– ರವಿಯೋಗ- ಮುಂಜಾನೆ 06:25 ರಿಂದ 08:41

ಕಾತ್ಯಾಯಿನಿ ದೇವಿಯು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾಳೆ. ಈ ದಿನ ಭಗವತಿ ದೇವಿಗೆ ಕೆಂಪು ಬಣ್ಣದ ಗುಲಾಬಿ ಹೂವುಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮಾತೆಯ ಆಶೀರ್ವಾದ ಸುಲಭವಾಗಿ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಕಾತ್ಯಾಯಿನಿ ದೇವಿಗೆ ಕೆಂಪು ಬಣ್ಣವನ್ನು ಹೊರತುಪಡಿಸಿ ಜೇನು ತುಪ್ಪವೆಂದರೆ ಅತ್ಯಂತ ಪ್ರಿಯ. ಈಕೆಯ ಪೂಜೆಯ ಸಮಯದಲ್ಲಿ ತಾಯಿ ಕಾತ್ಯಾಯಿನಿಗೆ ಜೇನುತುಪ್ಪವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಭಕ್ತನ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುವುದು.

ಕಾತ್ಯಾಯಿನಿ ಪೂಜೆ ವಿಧಾನ​:-

– ಕಾತ್ಯಾಯಿನಿ ಆರಾಧನೆಯ ಸಮಯ ಸಂಧ್ಯಾಕಾಲ. ಆದುದರಿಂದ ಈ ಸಮಯದಲ್ಲಿ ಮಾತೃದೇವತೆಯನ್ನು ಧೂಪ, ದೀಪ, ಗುಗ್ಗುಲುಗಳಿಂದ ಪೂಜಿಸಬೇಕು.
– ಕಾತ್ಯಾಯಿನಿಯನ್ನು ಸಂಧ್ಯಾಕಾಲದಲ್ಲಿ ಹಳದಿ ಅಥವಾ ಕೆಂಪು ವಸ್ತ್ರಗಳನ್ನು ಧರಿಸಿ ಪೂಜಿಸಬೇಕು.
– ತಾಯಿಯ ವಿಗ್ರಹವನ್ನು ಶುದ್ಧ ನೀರಿನಿಂದ ಅಥವಾ ಗಂಗಾಜಲದಿಂದ ಅಭಿಷೇಕ ಮಾಡಿ.
– ತಾಯಿಗೆ ಕೆಂಪು ಬಣ್ಣ, ಕುಂಕುಮ ಹಚ್ಚಿ.
– ಅವರಿಗೆ ಹಳದಿ ಹೂವುಗಳು ಮತ್ತು ಹಳದಿ ನೈವೇದ್ಯವನ್ನು ಅರ್ಪಿಸಿ.

ತಾಯಿಯ ಮುಂದೆ ದೀಪವನ್ನು ಬೆಳಗಿಸಿ.
– ಇದರ ನಂತರ, 3 ತುಂಡು ಅರಿಶಿನವನ್ನು ಸಹ ಅರ್ಪಿಸಿ.
– ಪೂಜೆಯ ನಂತರ ಅರಿಶಿನದ ಉಂಡೆಗಳನ್ನು ನಿಮ್ಮ ಬಳಿ ಸುರಕ್ಷಿತವಾಗಿಟ್ಟುಕೊಳ್ಳಿ.
– ತಾಯಿ ಕಾತ್ಯಾಯನಿಗೆ ಜೇನುತುಪ್ಪವನ್ನು ಅರ್ಪಿಸಿ.
– ಈ ಜೇನುತುಪ್ಪವನ್ನು ಬೆಳ್ಳಿ ಅಥವಾ ಮಣ್ಣಿನ ಪಾತ್ರೆಯಲ್ಲಿ ಅರ್ಪಿಸಿದರೆ ಉತ್ತಮ.
– ತಾಯಿಗೆ ಪರಿಮಳಯುಕ್ತ ಹೂವುಗಳನ್ನು ಅರ್ಪಿಸುವುದರಿಂದ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ
– ಇದರ ನಂತರ, ತಾಯಿಯ ಮುಂದೆ ಕುಳಿತು ಮಂತ್ರಗಳನ್ನು ಪಠಿಸಿ.

ಕಾತ್ಯಾಯಿನಿ ದೇವಿ ಮಂತ್ರ​

”ಓಂ ಹ್ರೀಂ ನಮಃ”
– ”ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ|
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಾತಿನೀ||”
– ”ಓಂ ದೇವಿ ಕಾತ್ಯಾಯನ್ಯೈ ನಮಃ||”
– ”ಯಾ ದೇವಿ ಸರ್ವಭೂತೇಷು ಮಾಂ ಕಾತ್ಯಾಯಿನೀ ರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||”

ಕಾತ್ಯಾಯಿನಿ ದೇವಿ ಕಥೆ​

ಧಾರ್ಮಿಕ ಪುರಾಣಗಳ ಪ್ರಕಾರ, ದೇವತೆಗಳ ಸಂಯೋಜಿತ ಶಕ್ತಿಗಳಿಂದ ಕಾತ್ಯಾಯಿನಿಯು ಪ್ರಕಟಗೊಳ್ಳುವುದರ ಮೂಲಕ ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು. ಇದರಿಂದ ಕಾತ್ಯಾಯಿನಿ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...