ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದದ ಮೂರು ಟೆಸ್ಟ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಒಟ್ಟು 27 ವಿಕೆಟ್ ಕಬಳಿಸುವ ಮೂಲಕ ಭಾರತ ಸರಣಿ ಸ್ವೀಪ್ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಅಶ್ವಿನ್ ಇದೀಗ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‍ನಲ್ಲಿ ನಂ.1 ಬೌಲರ್ ಜೊತೆಗೆ ನಂ.1 ಆಲ್‍ರೌಂಡರ್ ಪಾತ್ರಕ್ಕೂ ಭಾಜನರಾಗಿದ್ದಾರೆ. ಇಂದೋರ್ ಸ್ಟೇಡಿಯಂನ ಅಂತಿಮ ಟೆಸ್ಟ್ ಪಂದ್ಯದಲ್ಲಿ 140 ರನ್ ಜೊತೆಗೆ 13 ವಿಕೆಟ್ ಕಬಳಿಸುವ ಮೂಲಕ ಮೂರು ಟೆಸ್ಟ್ ಪಂದ್ಯದಲ್ಲಿ ಒಟ್ಟು 27 ವಿಕೇಟ್ ಪಡೆದಿದ್ದಾರೆ. ಈ ಮೂಲಕ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ಟೆಸ್ಟ್ ರ್ಯಾಂಕಿನ್‍ನಲ್ಲಿ ಮೂರನೇ ಸ್ಥಾನದಲ್ಲಿದ್ದ ಆರ್.ಅಶ್ವಿನ ಈಗ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‍ಸನ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಒಟ್ಟು 900 ಅಂಕ ಕಲೆ ಹಾಕಿದ ಸಾಧನೆಯನ್ನೂ ಅಶ್ವಿನ್ ಮಾಡಿದ್ದಾರೆ..
ಆಡಿದ 39 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 220 ವಿಕೆಟ್ ಸಂಪಾದಿಸಿರುವ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ.
POPULAR STORIES :
60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!
ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!
ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!
ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!