Bigg Boss Kannada: ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್!
ಬೆಂಗಳೂರು: ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಕೂಡ ಒಂದು. ಆದ್ರೆ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಹೌದು ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್‌ಬೈ ಹೇಳುವ ಮೂಲಕ ಕಿಚ್ಚ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕಿಚ್ಚನ ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ನೀವೆಲ್ಲರೂ BBK11 ರಲ್ಲಿ ತೋರಿಸಿರುವ ಪ್ರತಿಕ್ರಿಯೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ತೋರಿಸಿದ ಪ್ರೀತಿಯ ಬಗ್ಗೆ ಹಲವರು ಹೇಳುತ್ತಾರೆ. ಇದು ನಮ್ಮೊಂದಿಗೆ ಪ್ರಯಾಣಿಸಿದ 10+1 ವರ್ಷದ ಶ್ರೇಷ್ಠ ಅನುಭವವಾಗಿತ್ತು…, ಮತ್ತು ಈಗ ನಾನು ನನ್ನ ಮುಂದಿನ ಹೆಜ್ಜೆಗೆ ಸಾಗುವ ಸಮಯವಾಗಿದೆ….
ಇದು BBK ಯಲ್ಲಿನ ನನ್ನ ಕೊನೆಯ ಆವೃತ್ತಿಯಾಗಲಿದೆ… ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು ಮತ್ತು ಈ ವರ್ಷಗಳಲ್ಲಿ BB ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ… ಈ ಆವೃತ್ತಿಯನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸೋಣ… ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗೆ ಸುದೀಪ್ ಅವರು ದೊಡ್ಮನೆ ಆಟ ಸೀಸನ್ 11 ನಡೆಸಿಕೊಡಲ್ಲ ಅಂತಾ ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿಯ, ಅಭಿಮಾನಿಗಳ ಒತ್ತಾಯಕ್ಕೆ ಸುದೀಪ್ ಸಾಥ್ ನೀಡಿದ್ದರು. ಈಗ ಮುಂದಿನ ಸೀಸನ್ ನಡೆಸಿಕೊಡಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.