ನಿಮ್ಮ ಸೊಂಟದ ಸುತ್ತ ಇರುವ ಬೊಜ್ಜು ಕರಗಲು ಒಂದು ಗ್ಲಾಸ್ ಮಜ್ಜಿಗೆಗೆ ಇದನ್ನು ಬೆರೆಸಿ ಸೇವಿಸಿ!
ಯಾವುದಾದರೂ ಫಂಕ್ಷನ್ಗೆ ಹೋದಾಗ ಸಂಬಂಧಿಕರ ಹೆಂಗಸು ಸ್ವಲ್ಪ ತೆಳ್ಳಗಿದ್ದರೂ ಆಕೆಯನ್ನು ಪಕ್ಕಕ್ಕೆ ಕರೆದು, ‘ತೆಳ್ಳಗಾಗೋಕೆ ಏನ್ರೀ ಮಾಡಬೇಕು? ತಿನ್ನೋದೆಲ್ಲ ಎಷ್ಟೇ ಕಡಿಮೆ ಮಾಡಿದರೂ ಹೊಟ್ಟೆ ಮಾತ್ರ ಇಳಿತಾ ಇಲ್ಲ ಕಣ್ರಿ. ಸುಲಭವಾಗಿ ಬೊಜ್ಜು ಕರಗಬೇಕೆಂದ್ರೆ ಏನು ಮಾಡ್ಬೇಕು? ನೀವು ಹೇಗೆ ಇಷ್ಟು ಸಣ್ಣಗಾದ್ರಿ?’ ಎಂದು ಕೇಳದೆ ಸುಮ್ಮನೆ ಕೂರುವ ಜಾಯಮಾನ ಮಹಿಳೆಯರದ್ದು ಅಲ್ಲವೇ ಅಲ್ಲ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
ಶಿಕಂಜಿ ಮಜ್ಜಿಗೆ ಕೊಬ್ಬನ್ನು ಬೇಗ ಕರಗಿಸಲು ತುಂಬಾ ಸಹಕಾರಿ. ಈ ಮಜ್ಜಿಗೆ ನಿಮ್ಮ ಹೊಟ್ಟೆಯ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ ಚಯಾಪಚಯವನ್ನು ವೇಗಗೊಳಿಸುತ್ತದೆ. ಅಲ್ಲದೆ, ಈ ಮಜ್ಜಿಗೆ ಹೊಟ್ಟೆಯನ್ನು ತುಂಬಲು ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಈ ಮಜ್ಜಿಗೆಯನ್ನು ತಯಾರಿಸಲು ಶಿಕಂಜಿ ಪುಡಿ, ನಿಂಬೆ ಮತ್ತು ಕಪ್ಪು ಉಪ್ಪನ್ನು ಮಿಶ್ರಣ ಮಾಡಿ ನಂತರ ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ ಕುಡಿಯಿರಿ.
ಚಿಯಾ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಹೊಟ್ಟೆಯ ಚಯಾಪಚಯ ಚಟುವಟಿಕೆಗಳನ್ನು ವೇಗಗೊಳಿಸುತ್ತದೆ. ಮಜ್ಜಿಗೆಗೆ ಚಿಯಾ ಬೀಜಗಳನ್ನು ಸೇರಿಸಿ ಕುಡಿದರೆ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ
ಅಗಸೆ ಬೀಜಗಳನ್ನು ಹುರಿದು ಅದರ ಪುಡಿಯನ್ನು ತಯಾರಿಸಿ. ನಂತರ ಅದನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಿರಿ. ಇದು ನಿಮ್ಮ ದೇಹದಲ್ಲಿ ಚಯಾಪಚಯವನ್ನು ವೇಗಗೊಳಿಸಲು ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ.