ನಟಿ ಅಮೂಲ್ಯ ಅಣ್ಣ ವಿಧಿವಶ: ಅಂತಿಮ ದರ್ಶನ ಪಡೆದ ಸಿನಿ ಕಲಾವಿದರು, ಮೌನಕ್ಕೆ ಶರಣಾದ ಐಶು!
ಕನ್ನಡ ಚಿತ್ರರಂಗದ ಖ್ಯಾತ ನಟಿ ಅಮೂಲ್ಯ ಅವರ ಸಹೋದರ ದೀಪಕ ಅರಸು ಕಿಡ್ನಿ ವೈಫಲ್ಯದಿಂದ ನಿನ್ನೆ ವಿಧಿವಶರಾಗಿದ್ದಾರೆ. ಅದರಂತೆ ಇಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕಿರುತೆರೆ ಹಾಗೂ ಬೆಳ್ಳಿತೆರೆ ಕಲಾವಿದರು ಆಗಮಿಸಿ ದೀಪಕ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ನಮಿಸಿದ್ದಾರೆ.
ದೀಪಕ್ ಅರಸು ವೈಯಾಲಿ ಕಾವಲ್ ನಿವಾಸದಲ್ಲಿ ದೀಪಕ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಬಹಳಷ್ಟು ಆಪ್ತರು ಹಾಗೂ ಹಿತೈಷಿಗಳಿ ಆಗಮಿಸುತ್ತಿದ್ದಾರೆ.
ಕನ್ನಡದ ನಟ, ನೆನಪಿರಲಿ ಪ್ರೇಮ್ ಅವರು ದೀಪಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಅಣ್ಣನ ಅಗಲಿಕೆಯ ನೋವಿನಲ್ಲಿ ನಟಿ ಅಮೂಲ್ಯ ಅವರು ಮೌನಕ್ಕೆ ಶರಣಾಗಿದ್ದಾರೆ. ಬಳಿಕ ದೇಹದ ಅಂತ್ಯ ಸಂಸ್ಕಾರವನ್ನು ಸುಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಬಹಳಷ್ಟು ಕಲಾವಿದರು ಹಾಗೂ ತಂತ್ರಜ್ಞರು ದೀಪಕ್ ಅರಸು ಅವರ ಅಂತಿಮ ದರ್ಶನ್ ಪಡೆಯುತ್ತಿದ್ದಾರೆ. ಅಮೂಲ್ಯ ಸಹೋದರ ದೀಪಕ ಅರಸು ಅವರ ವೈಯಾಲಿ ಕಾವಲ್ ಮನೆಯಲ್ಲೀಗ ಸೂತಕದ ವಾತಾವರಣವಿದ್ದು, ದುಃಖ ಮಡುಗಟ್ಟಿದೆ.
ಬಹುಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲಲುತ್ತಿದ್ದ ದೀಪಕ ಅರಸ್, ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ.