ಮಳೆಯಿಂದ ಭಾರೀ ಅನಾಹುತ: ಬಿಬಿಎಂಪಿ ವಿರುದ್ಧ ಸಾಯಿ ಲೇಔಟ್ ನಿವಾಸಿಗಳು ಆಕ್ರೋಶ!

Date:

ಮಳೆಯಿಂದ ಭಾರೀ ಅನಾಹುತ: ಬಿಬಿಎಂಪಿ ವಿರುದ್ಧ ಸಾಯಿ ಲೇಔಟ್ ನಿವಾಸಿಗಳು ಆಕ್ರೋಶ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭಾರೀ ಅನಾಹುತ ಸೃಷ್ಟಿ ಆಗಿದೆ. ಅಲ್ಲದೇ ನಗರದ ಪ್ರತಿಷ್ಟಿತ ಸಾಯಿ ಲೇಔಟ್ ಇಂದು ಕೂಡ ಜಲಾವೃತವಾಗಿದೆ.

500 ಮನೆಗಳಿರೋ ಪ್ರತಿಷ್ಠಿತ ಬಡಾವಣೆ ಇದಾಗಿದ್ದು, 10 ವರ್ಷಗಳಿಂದ ಅದೇ ಜಲ ಸಂಕಷ್ಟ ಎದುರಿಸುತ್ತಿದ್ದಾರೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಪರದಾಟ ಮಾಡಿದ್ದಾರೆ. ರಸ್ತೆಯಲ್ಲೇ ಕೊಳಕು ನೀರು ನಿಂತಿದ್ದು, ರೋಸಿ ಹೋದ ಜನರಿಂದ ರಸ್ತೆ ತಡೆಗೆ ಪ್ಲ್ಯಾನ್ ಮಾಡಲಾಗಿದೆ.

ಹೇಳಿಯಷ್ಟು ಹೇಳಿ ಆಯ್ತು ನೋಡುವಷ್ಟು ನೋಡಿ ಆಯ್ತು. ಇನ್ನು ತಾಳ್ಮೆ ನಮ್ಮ ಬಳಿ ಇಲ್ಲ ಅಂತ ಜನಾಕ್ರೋಶ ವ್ಯಕ್ತವಾಗಿದೆ. ನಿನ್ನೆ 5 ನಿಮಿಷದ ಮಳೆಗೆ ಏರಿಯಾ ತುಂಬಾ ನೀರು ತುಂಬಿದೆ. ಮೊನ್ನೆಯಷ್ಟೇ ಫೈರ್ ಇಂಜಿನ್ ಬಂದು ನೀರು ಹೊರ ಹಾಕಿತ್ತು. ಈಗ ಮತ್ತೇ ರಸ್ತೆಯಲ್ಲಿ ನೀರು ತುಂಬಿ ಜನ ಹೈರಾಣಾಗಿದ್ದಾರೆ.

ಮೊನ್ನೆಯ ಮಳೆಗೆ ತುಂಬಿದ ನೀರಿನ ಎಫೆಕ್ಟ್ ಉಂಟಾಗಿದೆ. ಮನೆಯ ಫರ್ನಿಚರ್, ದುಬಾರಿ ಐಟೆಮ್ಸ್ ಹಾಳಾಗಿದೆ. ಈ ಮಧ್ಯೆ ಮತ್ತೆ ಮಳೆಯ ಎಫ್ಫೆಕ್ಟ್ ಜಲಾವೃತ ಆದ ಮನೆ ಅಂತ ಅಳಲು ತೋಡಿಕೊಂಡಿದ್ದಾರೆ. ಇಂದು ರಸ್ತೆ ತಡೆದು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ...

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ? ಮೂಸಂಬಿ ಹಣ್ಣು ಯಾವ...

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...