ಬಿಗ್‍ಬಾಸ್ ಅಂದಕೂಡ್ಲೇ ಅದ್ರಲ್ಲಿ ಮೊದಲು ನೆನ್ಪಾಗೋದೇ ಕಿರಿಕ್ ಪಾರ್ಟಿಗಳು, ಜಗಳ ಕಾಯೋರು.. ಅದೇ ರೀತಿಯಾಗಿ ಈ ಬಾರಿಯ ಅಂತಹ ಕಿರಿಕ್ ಯಾರು ಅನ್ನೋ ಕುತೂಹಲ ಎಲ್ಲರಿಗೂ ಇತ್ತು ಬಿಡಿ.. ಅದರ ಸ್ಥಾನ ತುಂಬ್ದೋರು ಮಾತ್ರ ಪ್ರಥಮ್.. ಅಲ್ಲ ಅಲ್ಲ ಒಳ್ಳೆ ಹುಡ್ಗ ಪ್ರಥಮ್ ಕಂಡ್ರೀ..! ಆದ್ರೆ ನಿಮ್ಗೆಲ್ಲಾ ಒಂದ್ ಸತ್ಯ ಗೊತ್ತಾ.. ಈ ಒಳ್ಳೆ ಹುಡ್ಗಾ ಪ್ರಥಮ್ ಯಾರೂ ಅಂತಾನೆ ಬಿಗ್‍ಬಾಸ್‍ಗೆ ಗೊತ್ತೇ ಇರ್ಲಿಲ್ವಂತೆ ನೋಡಿ.. ಮತ್ತೆ ಹೇಗೆ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾ ಈ ಪ್ರಥಮ್ ಅಂತ ಕೇಳ್ತೀರಾ..? ಇಲ್ಲಿದೆ ನೋಡಿ ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ..
ಪ್ರಥಮ್ ಮೂಲತಃ ಮೈಸೂರಿನ ಹುಡ್ಗ. ವಿದ್ಯಾಭ್ಯಾಸವನ್ನೆಲ್ಲಾ ಮೈಸೂರ್‍ನಲ್ಲೇ ಮುಗಿಸಿದ ಈ ಒಳ್ಳೆ ಹುಡ್ಗ.. ಸ್ಯಾಂಡಲ್‍ವುಡ್‍ಗೆ ಪರಿಚಯವಾದದ್ದು ‘ದೇವ್ರಿದಾನೆ ಬಿಡು ಗುರು’ ಎಂಬ ಸಿನಿಮಾ ನಿರ್ದೇಶನದ ಮೂಲಕ. ಈ ಚಿತ್ರದ ಹೀರೋ ಕಳೆದ ಬಾರಿಯ ಬಿಗ್‍ಬಾಸ್ ವಿಜೇತ ಅಖುಲ್ ಬಾಲಾಜಿ. ಇನ್ನು ಈ ಚಿತ್ರ ಪೂರ್ಣಗೊಳ್ಳೋಕು ಮೊದ್ಲು ಪ್ರಥಮ್ ಮತ್ತೊಂದು ಪ್ರಾಜೆಕ್ಟ್‍ಗೆ ಕೈ ಹಾಕಿದ್ರಂತೆ ಅದೇ ‘ಯಾರ್ರಿ ಒಳ್ಳೆ ಹುಡುಗ’. ಇದು ಪ್ರಥಮ್‍ನ ಈ ಹಿಂದಿನ ಚರಿತ್ರೆ.. ಆದ್ರೆ ಬಿಗ್‍ಬಾಸ್‍ಗೂ ಇವರಿಗೂ ಏನ್ ಸಂಬಂಧ ಅಂತ ನೀವ್ ಕೇಳಿದ್ರೆ.. ಮೊದ್ಲಿಗೆ ಬಿಗ್‍ಬಾಸ್ ಪ್ರಥಮ್‍ಗೆ ಕರೆಯೋದೋಗ್ಲಿ ಅವನ್ಯಾರು ಅಂತಾನೆ ಗೊತ್ತಿರ್ಲಿಲ್ವಂತೆ.. ತಾನಾಗಿಯೇ ಈ ಬಾರಿಯ ಬಿಗ್‍ಬಾಸ್ ಸ್ಪರ್ಧಾಳುಗಳಲ್ಲಿ ಒಬ್ಬನಾಗಲೇ ಬೇಕು ಎಂದು ನಿರ್ಧರಿಸಿದ ಪ್ರಥಮ್ ಸೀದಾ ಅವನು ಮೊದಲು ಭೇಟಿಯಾದದ್ದು ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ಅವರನ್ನ.. ಸೀದಾ ಅವರ ಚೇಂಬರ್‍ಗೆ ಹೋದ ಪ್ರಥಮ್.. ನೀವೇನ್ ಮಾಡ್ತೀರೋ ಗೊತ್ತಿಲ್ಲ ನಂಗೂ ಬಿಗ್‍ಬಾಸ್‍ಗೆ ಎಂಟ್ರಿ ಕೊಡಿ ಎಂದು ಕೇಳೇ ಬಿಟ್ರಂತೆ ನೋಡಿ.. ಹಿಂದೂ ಮುಂದು ಗೊತ್ತಿಲ್ಲದ ವ್ಯಕ್ತಿಯನ್ನು ಬಿಗ್‍ಬಾಸ್‍ಗೆ ಕಳ್ಸೋದು ಅಂದ್ರೆ ತಮಾಷೆಯ ಮಾತೇನೂ ಅಲ್ಲ.. ಯಾರಪ್ಪಾ ನೀನು..? ಎಲ್ಲಿಂದ ಬಂದಿದೀಯ..? ಬಿಗ್‍ಬಾಸ್‍ಗೆ ಕಳ್ಸೋಕೆ ನೀನ್ ಅದೇನ್ ದೊಡ್ ಸಾಧನೆ ಮಾಡಿದೀಯಾ..? ಹೇಳು ಎಂದು ಗುಂಡ್ಕಲ್ ಕೇಳಿದ್ರಂತೆ.. ಅದಕ್ಕೆ ಪ್ರಥಮ್ ನಾನು ಈ ಬಾರಿಯ ಬಿಗ್‍ಬಾಸ್‍ಗೆ ಹೋಗ್ಲೇ ಬೇಕು ಅದಕ್ಕಾಗಿ ನೀವೇನೇ ಹೇಳುದ್ರೂ ಮಾಡ್ತೇನೆ ಎಂದಿದ್ದಾನೆ.
ಅದಕ್ಕೆ ಗುಂಡ್ಕಲ್ ಒಂದಿಷ್ಟು ರಾಜಕಾರಣಿಗಳ ಬಳಿ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿಸಿಕೊಂಡು ಬರಲು ಹೇಳಿದ್ದರಂತೆ.. ನೀವು ನಂಬ್ತೀರೋ ಬಿಡ್ತೀರೋ ಪ್ರಥಮ್ ಗುಂಡ್ಕಲ್ ಹೇಳಿದ್ದಕ್ಕಿಂತ ಹೆಚ್ಚಿನ ರಾಜಕಾರಣಿಯ ಜೊತೆ ಮಾತನಾಡಿಸಿದ್ದನಂತೆ.. ಅಷ್ಟೇ ಅಲ್ಲಾ ಸ್ವಾಮಿ ಗುಂಡ್ಕಲ್ ಹೇಳದೇ ಇದ್ರೂ ಸಿಎಂ ಸಿದ್ದರಾಮಯ್ಯ ಅವರನ್ನೂ ಕ್ಯಾಮರಾ ಮುಂದೆ ಕೂರಿಸಿ ಬಿಗ್‍ಬಾಸ್ ಬಗ್ಗೆ ಮಾತನಾಡಿಸಿದ್ದನಂತೆ.. ಇದನ್ನೆಲ್ಲಾ ಕಂಡ ಗುಂಡ್ಕಲ್ ಅವರಿಗೆ ಈ ಬಾರಿಯ ಬಿಗ್‍ಬಾಸ್‍ಗೆ ಇವನೇ ಸರಿಯಾದ ವ್ಯಕ್ತಿ ಎಂದು ಆಯ್ಕೆ ಮಾಡಿದ್ದಾರೆ. ಇನ್ನು ಪ್ರಥಮ್ ಬಿಗ್‍ಬಾಸ್‍ಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ತನ್ನ ವರಸೆ ತೋರ್ಸಿದ್ದು ಇಡೀ ಕರ್ನಾಟಕವೇ ಅಚ್ಚರಿಗೊಳ್ಳುವಂತೆ ಬಿಗ್‍ಬಾಸ್ ಮನೆಯಲ್ಲಿ ನಡೆದುಕೊಳ್ಳೋದು ನೀವು ನೋಡ್ತಾ ಇದೀರಲ್ವ..!
Like us on Facebook The New India Times
POPULAR STORIES :
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!
ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!
ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!
ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!
ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!