ಬೈಕ್ನಲ್ಲಿ ಪಟಾಕಿ ಸಾಗಿಸೋ ಮುನ್ನ ಎಚ್ಚರ ಎಚ್ಚರ: ನೋಡ ನೋಡುತ್ತಿದ್ದಂತೆ ಬ್ಲಾಸ್ಟ್!
ಅಮರಾವತಿ:- ಸಾರ್ವಜನಿಕರರೇ ಬೈಕ್ನಲ್ಲಿ ಪಟಾಕಿ ಸಾಗಿಸೋ ಮುನ್ನ ಎಚ್ಚರ ಎಚ್ಚರ. ಇಲ್ಲೊಂದು ನೋಡ್ ನೋಡ್ತಿದಂಗೆ ಪಟಾಕಿ ಬ್ಲಾಸ್ಟ್ ಆಗಿದೆ.
ಆಂಧ್ರದ ಇಲೂರು ಜಿಲ್ಲೆಯಲ್ಲಿ ಬೈಕ್ನಲ್ಲಿ ಪಟಾಕಿ ಸಾಗಿಸುವಾಗ ಏಕಾಏಕಿ ಸ್ಫೋಟಗೊಂಡು ಓರ್ವ ಸಾವು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಜರುಗಿದೆ.
ರಸ್ತೆಯ ಗುಂಡಿಗೆ ಬೈಕ್ ಇಳಿದಾಗ ಈರುಳ್ಳಿ ಪಟಾಕಿ ಕೆಳಗೆ ಬಿದ್ದಿದೆ. ಪರಿಣಾಮ ಕ್ಷಣದಲ್ಲೇ ಪಾಟಾಕಿ ಸ್ಫೋಟಗೊಂಡಿದೆ. ಪಟಾಕಿ ಬ್ಲಾಸ್ ಆದ ಪರಿಣಾಮ ಸುಧಾಕರ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೇ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ಮಾತಾಡುತ್ತಿದ್ದಾಗ ಆರು ಮಂದಿಗೆ ಗಾಯಗೊಂಡಿದ್ದಾರೆ.
ಇನ್ನೂ ಪಟಾಕಿ ಸ್ಫೋಟಗೊಂಡ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪಟಾಕಿ ಸ್ಫೋಟದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.