ಆಸ್ಪತ್ರೆಯಲ್ಲಿ ನಟ ದರ್ಶನ್ ವಿಲವಿಲ: ದಾಸನ ಪರಿಸ್ಥಿತಿ ಗಂಭೀರ!

Date:

ಆಸ್ಪತ್ರೆಯಲ್ಲಿ ನಟ ದರ್ಶನ್ ವಿಲವಿಲ: ದಾಸನ ಪರಿಸ್ಥಿತಿ ಗಂಭೀರ!

ಬೆಂಗಳೂರು:- ಬಳ್ಳಾರಿ ಜೈಲಿನಲ್ಲಿ ಕಷ್ಟದ ದಿನಗಳನ್ನು ಅನುಭವಿಸಿ, ಆರೋಗ್ಯ ಸಮಸ್ಯೆ ಕಾರಣ ಹೇಳಿದ್ದ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದಾರೆ. ಹೀಗೆ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದರೂ ದರ್ಶನ್ ತೂಗುದೀಪ್ ಅವರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಇದೀಗ ಸಿಲುಕಿದೆ.

ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಬಿಟ್ಟು ಕೊಡಲ್ಲ ಎಂಬುದು ಮತ್ತೆ ಮತ್ತೆ ಸಾಬೀತು ಆಗುತ್ತಿದೆ. ಯಾಕಂದ್ರೆ ಅಭಿಮಾನಿಗಳಿಗೆ ಡಿ-ಬಾಸ್ ಮೇಲೆ ಪ್ರೀತಿ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಅಭಿಮಾನಿಗಳು ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತ ಜೈಕಾರ ಹಾಕುತ್ತಿದ್ದಾರೆ. ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆದ ನಂತರ ಹೊಸ ಶಕ್ತಿ ರೂಪುಗೊಂಡಂತೆ ಆಗಿದೆ. ಆದರೆ ಇದೇ ಸಮಯದಲ್ಲಿ, ಡಿ-ಬಾಸ್ ಆಸ್ಪತ್ರೆಯಲ್ಲಿ ದರ್ಶನ್ ತೂಗುದೀಪ್ ಪರಿಸ್ಥಿತಿ ಗಂಭೀರ? ಎನ್ನಲಾಗಿದೆ.

2013ರ ಸಮಯದಲ್ಲಿ ಸಿನಿಮಾ ಶೂಟಿಂಗ್ ಒಂದು ನಡೆಯುವ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಕುದುರೆ ಮೇಲಿಂದ ಬಿದ್ದಿದ್ದರು. ಬೃಂದಾವನ ಸಿನಿಮಾ ಶೂಟಿಂಗ್ ಸಮಯದಲ್ಲಿ ಘಟನೆ ನಡೆದಿತ್ತು. ಸುಮಾರು 11 ವರ್ಷ ಹಿಂದೆ ಬಿದ್ದು ನೋವು ಕೂಡ ಮಾಡಿಕೊಂಡಿದ್ದರು ದರ್ಶನ್ ತೂಗುದೀಪ್ ಅವರು. ಅದೇ ನೋವು ಈಗ ಕಾಡುತ್ತಿದ್ದು, ಇದೇ ಕಾರಣಕ್ಕೆ ಇದೀಗ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ ಎಂಬ ಆರೋಪ ಕೇಳ ಬಂದಿದೆ. ಮತ್ತೊಂದು ಕಡೆಯಲ್ಲಿ ದರ್ಶನ್ ತೂಗುದೀಪ್ ಅವರ ಆರೋಗ್ಯ ಕೈಕೊಟ್ಟ ಕಾರಣ ನರಳುವ ಪರಿಸ್ಥಿತಿ ಬಂದಿದೆ.

ಬಳ್ಳಾರಿ ಜೈಲಿಂದ ದರ್ಶನ್ ತೂಗುದೀಪ್ ಅವರನ್ನ ರಿಲೀಸ್ ಮಾಡುವಾಗ ಮಾನ್ಯ ಹೈಕೋರ್ಟ್ ಹಲವು ಷರತ್ತು ವಿಧಿಸಿದೆ. ಅದರಲ್ಲೂ ಪ್ರಮುಖವಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ಸಾಕ್ಷಿಗಳಿಗೆ ಯಾವುದೇ ರೀತಿ ಬೆದರಿಕೆ ಹಾಕದಂತೆ ಖಡಕ್ ವಾರ್ನಿಂಗ್ ಕೂಡ ಕೊಡಲಾಗಿದೆ. ಈಗ ಇದೇ ಆದೇಶದ ಹಿನ್ನೆಲೆ ದರ್ಶನ್ ತೂಗುದೀಪ್ ಅವರ ಮೇಲೆ ಪೊಲೀಸ್ ಪಡೆಯಿಂದ ಹದ್ದಿನ ಕಣ್ಣು ಇಡಲಾಗಿದೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...