ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ
ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ, ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಅಗ್ರಹಿಸಿ ಬಿಜೆಪಿ ನಾಯಕರ ಆಕ್ರೋಶ ಜೋರಾಗ್ತಿದೆ. ಇದೀಗ ಅಣ್ಣ ಗುತ್ತಿಗೆದಾರನಾಗಿದ್ದ ಎಂದು ತಮ್ಮ ಕುಟುಂಬ ಯಾವತ್ತೂ ಹೇಳಿಲ್ಲ, ಅವನ ಕೆಲಸಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಕಲಬುರಗಿ ಕಚೇರಿಯಲ್ಲಿದ್ದವು ಅದರೆ ಅವುಗಳನ್ನು ನಾಶಪಡಿಸಲಾಗಿದೆ ಎಂದು ಸಚಿನ್ ಸಹೋದರಿ ಸುರೇಖಾ ಆರೋಪಿಸಿದ್ದಾರೆ.
ಇನ್ನೂ ಈ ಸರ್ಕಾರ ಇವತ್ತು ಅವನು ಗುತ್ತಿಗೆದಾರ ಆಗಿರಲಿಲ್ಲ ಎನ್ನುತ್ತಿದೆ, ನಾಳೆ ಅವನು ಹುಟ್ಟೇ ಇರಲಿಲ್ಲ ಅಂತ ಹೇಳಿದರೂ ಆಶ್ಚರ್ಯವಿಲ್ಲ, ತಮ್ಮ ಕುಟುಂಬಕ್ಕೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.