ಐವತ್ತಾದ್ರೂ ‘ಅಮೂಲ್’ ಇನ್ನು ಬೇಬಿನೇ..!

Date:

ಅಮೂಲ್‍ಬೇಬಿ ಜಾಹಿರಾತು ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಬಹಳ ಖುಷಿ ನೀಡೋ ಒಂದು ಅದ್ಭುತ ಜಾಹಿರಾತು.. ಕೆಂಪು ಚುಕ್ಕಿ ಚುಕ್ಕಿ ಫ್ರಾಕ್ ತೊಟ್ಟು, ಕೈಯಲ್ಲೊಂದು ಬ್ರೆಡ್ ಟೋಸ್ಟ್ ಇಟ್ಕೊಂಡು ಸಖತ್ ಫೋಸ್ ನೀಡುತ್ತಾ ಕೋಟ್ಯಾಂತರ ಜನರ ಮನೆ ಮಾತಾಗಿರೋ ಅಮೂಲ್‍ಬೇಬಿಗೆ ಇಂದು ಅರ್ಧಶತಕದ ಸಂಭ್ರಮ..! ಅಂದ್ರೆ ಈ ಬೆಡಗಿಗೆ ಈಗ 50ನೇ ಹುಟ್ಟು ಹಬ್ಬ ಕಂಡ್ರಿ… ಮೂಗೇ ಇಲ್ಲದ ಈ ಕುಳ್ಳಮ್ಮಳಿಗೆ ಬೇರೆ ಬೇರೆ ವಿಷಯಗಳಿಗೆ ಮೂಗ್ತೂರ್ಸೋ ಹವ್ಯಾಸ.. ಅಂದಿನ ಪ್ರಧಾನಿ ಇಂಧಿರಾಗಾಂಧಿ ಅವರ ತುರ್ತುಪರಿಸ್ಥಿತಿಯಿಂದಿಡಿದು ಇಂದಿನ ಪ್ರಧಾನಿ ಮೋದಿ ಅವರ ಸೂಟ್‍ನ ಕುರಿತಾಗಿ ವ್ಯಂಗ್ಯಾತ್ಮಕ ಹೇಳಿಕೆಗಳ ಮೂಲಕ ಎಲ್ಲರಿಗೂ ಬಿಸಿ ತಟ್ಟಿಸಿದ ಈಕೆಗೆ ಐವತ್ತಾದ್ರೂ ಇನ್ನು ಬೇಬಿ ಎಂಬ ಖ್ಯಾತನಾಮ..!
1966ರಲ್ಲಿ ಜನನ ಕಂಡ ಅಮೂಲ್ ತನ್ನ ಮೊಟ್ಟ ಮೊದಲ ಪ್ರಚಾರ ಕಾರ್ಯ ಆರಂಭಿಸಿದ್ದು ಬೆಣ್ಣೆ ಮತ್ತಿತರ ಬ್ರಾಂಡ್ ಜಾಹಿರಾತು ಮೂಲಕ.. ಸಿಲ್ವೆಸ್ಟರ್ ದಚುನ್ಹ ಮತ್ತು ವ್ಯಂಗ್ಯಚಿತ್ರಕಾರ ಯುಸ್ಟೆಸ್ ಫರ್ನಾಂಡಿಸ್ ಮತ್ತು ಉಷಾ ಕತ್ರರ್ ಕಲ್ಪನೆಯ ಕೂಸಾದ ಅಮೂಲ್‍ಬೇಬಿ ಇಂದಿಗೂ ತನ್ನ ಖ್ಯಾತಿಯನ್ನು ಹಾಗೇ ಉಳಿಸಿಕೊಂಡು ಬಂದಿದೆ. ಈ ಆಡ್ ಬಂದಾಗ ಭಾರತದಲ್ಲಿ ಟಿವಿ ಮಾಧ್ಯಮ ಇರಲೇ ಇಲ್ಲ.. ಪತ್ರಿಕೆಗಳು ಕೂಡ ಉಳ್ಳವರ ಸ್ವತ್ತಾಗಿತ್ತು. ಆಗ ಅಮೂಲ್ ಬಹು ದೊಡ್ಡ ಹೋರ್ಡಿಂಗ್‍ಗಳ ಮೂಲಕ ತನ್ನ ಜಾಹಿರಾತು ಪ್ರಚಾರ ಆರಂಭಿಸಿತ್ತು. 1990ರ ವೇಳೆಗೆ ತನ್ನ ತಂದೆಯಿಂದ ಅಮೂಲ್ ಪ್ರಚಾರ ಜವಾಬ್ದಾರಿಯನ್ನು ಹೊತ್ತ ರಾಹುಲ್ ದೋಚುನ್ಹ ಕಾಲಾನಂತರದಲ್ಲಿ ಅಮೂಲ್‍ಬೇಬಿಯ ಚಿತ್ರಣವನ್ನೇ ಬದ್ಲಾಯಿಸಿಬಿಟ್ರು.. ರಾಹುಲ್ ಆನಂತರವಾಗಿ ಅಮೂಲ್‍ಬೇಬಿಯನ್ನ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಿನಿಮಾರಂಗದ ವಿದ್ಯಾಮಾನಗಳ ಕುರಿತಾಗಿ ಪಂಚ್ ಡೈಲಾಗ್‍ಗಳ ಮೂಲಕ ಅಮೂಲ್‍ಗೆ ಇನ್ನಷ್ಟು ಪ್ರಚಾರತೆಯನ್ನು ಗಿಟ್ಟಿಸಿಕೊಂಡರು. ಅಮೂಲ್‍ನನ್ನು ಬೇರೆ ಬೇರೆ ರೀತಿಯಲ್ಲಿ ಬದಲಾಯಿಸಿದ ರಾಹುಲ್ ಮತ್ತು ಆತನ ತಂಡಕ್ಕೆ ಎಂದೂ ಕೂಡ ಅಮೂಲ್‍ನನ್ನು ದೊಡ್ಡವಳಾಗಿ ಮಾಡಬೇಕೆಂಬ ಮನಸೇ ಆಗಿಲ್ಲ ನೋಡಿ.. ಅದ್ರಿಂದಲೇ ಅಮೂಲ್ ಐವತ್ತಾದರೂ ಬೇಬಿಯಾಗಿಯೇ ಪ್ರಖ್ಯಾತಿ..!
ಕಾಂಟ್ರವರ್ಸಿ ಅಮೂಲ್ ಬೇಬಿ..!
ಇನ್ನು ಅಮೂಲ್ ಬೇಬಿ ಈ ಹಿಂದೆ ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಶುಭಹಾರೈಕೆ ಮಾಡಿ ಸುದ್ದಿಯಾಗಿ ಸ್ವತಃ ಮೋದಿ ಅವರೇ ನಾನು ಅಮೂಲ್‍ಬೇಬಿಯ ದೊಡ್ಡ ಫ್ಯಾನ್ ಎಂದಿದ್ದರು. ಆದ್ರೆ ನೀವು ನಂಬ್ತೀರೋ ಬಿಡ್ತೀರೋ ಅಮುಲ್‍ಬೇಬಿ ನೋಡೋಕೆ ಮಾತ್ರ ಬೇಬಿ ಆಕೆ ಬಹುದೊಡ್ಡ ಕಾಂಟ್ರುವರ್ಸಿ ಕ್ವೀನ್ ಗೊತ್ತಾ..? ಅದಕ್ಕೆ ಸೂಕ್ತ ಉದಾಹರಣೆಯಾಗಿ ಶಿವಸೇನೆ ರಾಹುಲ್ ಕಛೆರಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ ಘಟನೆಗಳು, ಉದ್ಯಮಿ ಜಗನ್ ಮೋಹನ್ ದಾಲ್ಮಿಯಾ ಅವರು 500 ಕೋಟಿ ಮಾನನಷ್ಟ ಮುಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದ ಪ್ರಸಂಗಗಳು ಇಲ್ಲಿ ಸ್ಮರಿಸಬಹುದು. ಹೀಗೆ ರಾಜಕಾರಣಿಗಳ, ಉದ್ಯಮಿಗಳ ಕೆಂಗಣ್ಣಿಗೂ ಗುರಿಯಾಗಿರುವ ಅಮೂಲ್ ಇಂದಿಗೂ ಭಾರತೀಯ ಕಣ್ಮಣಿ ಅಂದ್ರೆ ತಪ್ಪಾಗೊಲ್ಲ.
ದಶಕಗಳ ಪ್ರಯತ್ನಕ್ಕೆ ಸಂದ ಫಲ
ಇನ್ನು ಅಮೂಲ್‍ಬೇಬಿ ಹಿಂದೆ ಹಲವಾರು ವರ್ಷಗಳಿಂದ ನಿರಂತರವಾಗಿ ದುಡಿದ ಹಿರಿಯ ಕೈಗಳಿವೆ. ಅಮೂಲ್‍ನನ್ನು ಕೇವಲ ಜಾಹಿರಾತು ಪ್ರಚಾರ ಕಾರ್ಯದಲ್ಲದೇ ಸಾಮಾಜಿಕ ಕಳಕಳಿಯಲ್ಲೂ ಅಳವಡಿಕೊಂಡಿರುವ ರಾಹುಲ್ ಅವರ ಜೊತೆ ಸುಮಾರು ಇಪ್ಪತ್ತು ಮೂವತ್ತು ವರ್ಷಗಳಿಂದ ದುಡಿಯುತ್ತಿರೊ ಅನುಭವಿಗಳ ಸಾಥ್ ಕೂಡ ಇದೆ. ಜಾನೇರಿಯಾ ಅವರ ಬಳಿ ಅಮೂಲ್ ಕಾಪಿರೈಟರ್‍ಗಳಿದ್ದು ಅವರೆಲ್ಲರೂ ಕಳೆದ 22 ವರ್ಷಗಳಿಂದ ಅಮೂಲ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಚಿತ್ರಕಾರ ಜಯಂತ್ ರಾಣೆ ಕಳೆದ ೩೦ ವರ್ಷಗಳಿಂದ ಅಮೂಲ್‍ಬೇಬಿಯನ್ನು ಚಿತ್ರಿಸುವ ಮಹಾನ್ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.. 1960 ರಲ್ಲಿ ತಿಂಗಳಿಗೊಮ್ಮೆ ಜನರಿಗೆ ಗೋಚರವಾಗ್ತಾ ಇದ್ದ ಅಮೂಲ್ 70-80ರ ದಶಕದಲ್ಲಿ 15 ದಿನಕ್ಕೊಮ್ಮೆ ಕಾಣಿಸಿಕೊಳ್ಳಲು ಆರಂಭಿಸಿದಳು.. 90ರಲ್ಲಿ ವಾರಕ್ಕೊಮ್ಮೆ ಬಡ್ತಿ ಪಡೆಯಿತು. ಆದರೆಈಗ ಟೈಮ್ಸ್ ಆಫ್ ಇಂಡಿಯಾದಲ್ಲಿ ವಾರದಲ್ಲಿ ಐದು ದಿನ ಕಾಣಿಸಿಕೊಳ್ಳುತಿದೆ ನೋಡಿ.! ಅಮೂಲ್ ಕೇವಲ ಇಂಗ್ಲೀಷ್ ಹಿಂದಿಗಳಲ್ಲದೇ ಪ್ರಾದೇಶಿಕ ಭಾಷೆಗಳಾದ ತಮಿಳು, ಗುಜರಾತಿ, ಪಂಜಾಬಿ ಮತ್ತು ಬೆಂಗಾಳಿ ಭಾಷೆಯಲ್ಲೂ ಸಹ ಪ್ರಚಾರ ಪಡೆಯುತ್ತಿದೆ. ವಿಶಿಷ್ಟ ಅಂದ್ರೆ ಅಮೂಲ್‍ಗೆ ಇಂದಿಗೆ ಐವತ್ತರ ಸಂಭ್ರಮ.. ಯಾರಿಂದಲೂ ಕೂಡ ಊಹಿಸಲು ಸಾಧ್ಯವಾಗದೇ ಇರೋ ಒಂದು ವಿಷಯ. ಆದ್ರೆ ಪ್ರಾರಂಭದ ಅಮೂಲ್‍ಬೇಬಿ ಇಂದಿಗೂ ಕೂಡ ಅಮೂಲ್ ಬೇಬಿಯೇ ಆಗಿ ಉಳಿದು ಬಿಟ್ಟಿದ್ದಾಳಷ್ಟೇ..!

Like us on Facebook  The New India Times

POPULAR  STORIES :

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...