ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್: ಕಣ್ಣೀರು ಒರೆಸಿದ ಸುದೀಪ್ – ಕಿಚ್ಚನ ಗುಣ ಕಂಡು ಅಭಿಮಾನಿಗಳು ಖುಷಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಚೈತ್ರಾ ಕುಂದಾಪುರ ಅವರ ಆಟ ಮುಗಿದಿದೆ. ಹಲವು ಬಾರಿ ನಾಮಿನೇಟ್ ಆಗಿ ಬಚಾವ್ ಆಗಿದ್ದ ಅವರು ಈ ವಾರ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಾಗ ಚೈತ್ರಾ ಅವರು ಸಖತ್ ಎಮೋಷನಲ್ ಆಗಿದ್ದರು. ಅದಲ್ಲದೆ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಬಂದ ಚೈತ್ರಾಗೆ ತಮ್ಮ ಜರ್ನಿಯ ವಿಡಿಯೋ ತೋರಿಸಲಾಯಿತು.
ಆಗ ಚೈತ್ರಾ ಕಣ್ಣೀರು ಹಾಕಿದರು. ‘ಯಾಕೆ ಅಳೋದು’ ಎಂದು ಸುದೀಪ್ ಚೈತ್ರಾ ಅವರ ಕಣ್ಣೀರು ಒರಿಸಿದರು. ‘ಉತ್ತಮವಾಗಿ ಆಟ ಆಡಿದ್ದೀರಿ. ಎಷ್ಟು ಬಾರಿ ಕಳಪೆ ತೆಗೆದುಕೊಂಡ್ರಿ ಅನ್ನೋದು ಮುಖ್ಯವಲ್ಲ. ವಿಡಿಯೋ ಕೊನೆಗೊಂಡಿದ್ದು ಉತ್ತಮದೊಟ್ಟಿಗೆ’ ಎಂದಿದ್ದಾರೆ ಸುದೀಪ್.
ಚೈತ್ರಾ ಕುಂದಾಪುರ ಅವರು ಇಷ್ಟು ವಾರಗಳ ಕಾಲ ಕಳಪೆ ಪಟ್ಟ ಪಡೆದಿದ್ದೇ ಹೆಚ್ಚು. ಈ ಸೀಸನ್ನಲ್ಲಿ ಅವರು ಅತಿ ಹೆಚ್ಚು ಬಾರಿ ಕಳಪೆ ಪಡೆದಿದ್ದಾರೆ. ಆದರೆ, ಕಳೆದ ವಾರ ಅವರಿಗೆ ಉತ್ತಮ ಬಂದಿತ್ತು. ಅದೇ ವಾರವೇ ಚೈತ್ರಾ ಅವರು ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಅವರಿಗೆ ಖುಷಿಯೂ ಇದೆ.
ಇನ್ನು ಸುದೀಪ್ ಅವರು ಚೈತ್ರಾ ಅವರ ಕಣ್ಣೀರು ಒರೆಸಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರನ್ನು ಶ್ಲಾಘಿಸಿದ್ದಾರೆ. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣವನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.