ಮೈಕ್ರೋ ಫೈನಾನ್ಸ್ ಕಿರುಕುಳ: ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ – ಸಚಿವ ಜಿ ಪರಮೇಶ್ವರ್
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ನಾಳೆಯೇ ಕ್ಯಾಬಿನೆಟ್ ಗೆ ತಂದು ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೆಲವು ಕಡೆ ಔಟ್ ಸೋರ್ಸ್ ಮಾಡಿದ್ದಾರೆ ಗೂಂಡಾಗಳ ತರಹ ವರ್ತನೆ ಮಾಡುತ್ತಿದ್ದಾರೆ.
ಅದನ್ನು ಮಾಡಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ, ಏಜೆನ್ಸಿ ಯಾವುದಿದೆ ಯಾವ ಮೈಕ್ರೋ ಫೈನಾನ್ಸ್ ನಿಂದ ತಪ್ಪುಗಳಾಗುತ್ತಿದೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅದನ್ನು ಮಾಡಿಯೇ ಮಾಡುತ್ತಿವೆ ಬಿಡುವುದಿಲ್ಲ.
ಇವತ್ತು ಹೆಚ್ ಕೆ ಪಾಟೀಲ್ ಕಾನೂನು ಸಚಿವರು, ಕಂದಾಯ ಸಚಿವರು ಹಾಗೂ ನಾನು ಮೂರು ಜನ ಸೇರಿ ಡ್ರಾಫ್ಟ್ ಅಂತಿಮಗೊಳಿಸುತ್ತೇವೆ. ನಾಳೆಯೇ ಕ್ಯಾಬಿನೆಟ್ ಗೆ ತಂದು ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದರು.