ಈ ಹುಡುಗನಿಗೆ ತಾನು ದೊಡ್ಡವನಾದ ಮೇಲೆ ಏನಾದರೊಂದು ಸಾಧಿಸಲೇಬೇಕೆಂಬ ಛಲ.. ಕಣ್ತುಂಬ ಕನಸನ್ನೇ ಹೊತ್ತು ತಿರುಗುತ್ತಿರೊ ಈ ಅಪ್ರಾಪ್ತ ಬಾಲಕನಿಗೆ ತಾನು ದೊಡ್ಡವನಾದ ಮೇಲೆ ಇಂಜಿನಿಯರಿಂಗ್ ಓದಿ ಮನೆಕಟ್ಟಬೇಕು ಎಂಬ ಹೆಬ್ಬಯಕೆ.. ಈ ಹೆಬ್ಬಯಕೆಗಳಿಗೆಲ್ಲಾ ತಿಲಾಂಜಲಿ ಇಟ್ಟಿದೆ ನೋಡಿ ಅವನ ಎರಡೂ ಕಿಡ್ನಿ ವೈಫಲ್ಯ..! ಕಡು ಬಡತನದಲ್ಲಿ ಹುಟ್ಟಿದ ಈತ ಎಲ್ಲರಂತೆ ಶಾಲೆಗೆ ಹೋಗಬೇಕೆಂಬ ಆಸೆ.. ತನ್ನ ಸಹಪಾಠಿಗಳೊಂದಿಗೆ ಆಟವಾಡೋ ಆಸೆ.. ಆದರೆ ಆ ಆಸೆಗಳೆಲ್ಲಾ ನೀರುಪಾಲಾದರೆ..? ಶಾಲಾ ಬೆಂಚ್ ಮೇಲೆ ಕುಳಿತು ಪಾಠ ಕೇಳ ಬೇಕಾದ ಈ ಬಾಲಕ ಆಸ್ಪತ್ರೆಯಲ್ಲಿ ಮಲಗುವಂತಾದರೆ..? ಕಡು ಬಡತನದಲ್ಲಿ ಬದುಕುತ್ತಿರುವ ಪೋಷಕರು ಇದ್ದ ಒಬ್ಬನೇ ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಈ ದಂಪತಿಗಳು ಬೇಡಿದ ದೇವರಿಲ್ಲ.. ಹತ್ತಿದ ಆಸ್ಪತ್ರಗಳಿಲ್ಲ.. ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿಯಾದರೂ ಮಗನನ್ನು ಬದುಕಿಸಬೇಕೆಂದು ಅವಿರತ ಪ್ರಯತ್ನ ಮಾಡ್ತಾ ಇದ್ರೂ ಮುಂದೆ ಆತನಿಗೆ ಬೇರೊಂದು ಕಿಡ್ನಿ ದೊರೆಯದೇ ಹೋದರೆ.. ಇಷ್ಟು ದಿನ ಇವನ ಪೋಷಕರು ಮಾಡಿದ ಪರಿಶ್ರಮ ಮಣ್ಣಲ್ಲಿ ಮಣ್ಣಾಗೊದಂತೂ ಖಂಡಿತ..!
ತುಮಕೂರು ಜಿಲ್ಲೆಯ ಮೈದಾಳ ಗ್ರಾಮದ 9 ವರ್ಷದ ಬಾಲಕ ಜಸ್ವಂತ್ ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.. ಇನ್ನು 3ನೇ ತರಗತಿಯಲ್ಲಿ ವ್ಯಾಸಾಂಗ ಮಾಡ್ತಾ ಇರೋ ಈ ಪುಟ್ಟ ಕಂದಮ್ಮ ದೊಡ್ಡವನಾದ ಮೇಲೆ ಇಂಜಿನೀಯರಿಂಗ್ ಓದಬೇಕೆಂಬ ಹೆಬ್ಬಯಕೆ.. ಆದರೆ ಆತನ ಬಯಕೆಗಳಿಗೆ ಅಡ್ಡಗಾಲಿನಂತಿದೆ ಅವನಿಗಾದ ಖಾಯಿಲೆ..! ಲವಲವಿಕೆಯಿಂದ ಓಡಾಡುತ್ತಿದ್ದ ಮಗ ಈಗ ಹಾಸಿಗೆ ಇಡಿದಿದ್ದಾನಲ್ಲಾ ಎಂಬ ಕೊರಗು ಈತನ ತಂದೆ ತಾಯಿಗೆ ಇದ್ದರೆ.. ತನಗೇನಾಗಿದೆ ಎಂಬ ಅರಿವೂ ಇಲ್ಲದೇ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಹುಡುಗನನ್ನು ಕಂಡರೆ ಎಂತವರ ಕಣ್ಣು ತೇವಗೊಳ್ಳುತ್ತೆ.. ಕಡು ಬಡತನಲ್ಲಿದ್ದರೂ ಸಾಲ ಸೂಲ ಮಾಡಿ ಮಗನಿಗೆ ತಿಂಗಳಿಗೊಮ್ಮೆ ಡಯಾಲಿಸಿಸ್ ಮಾಡಿಸುತ್ತಾರೆ ಈ ದಂಪತಿಗಳು.. ಈಗಾಗಲೇ ಮಗನನ್ನು ಗುಣಪಡಿಸಲು ಸುಮಾರು 4 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದು, ತನ್ನ ಮಗನ ಜೀವ ಉಳಿಸಿಕೊಳ್ಳೋಕೆ ದಾನಿಗಳ ಮೊರೆ ಹೋಗಿದ್ದಾರೆ.. ಸೆಕ್ಯೂರಿಟಿ ಹುದ್ದೆಯನ್ನು ಮಾಡುತ್ತಿರುವ ಜಸ್ವಂತ್‍ನ ತಂದೆ ಎಂ.ಬಿ ವೀರಭದ್ರಯ್ಯ ಮಗನ ಈ ಸ್ಥಿತಿ ಕಂಡು ಕೊರಗುತ್ತಿದ್ದಾರೆ.. ಇನ್ನು ತಾಯಿ ನಳೀನಾ ಮಗನ ಹಾರೈಕೆಗಾಗಿ ಆತನ ಜೊತೆಯಲ್ಲೇ ಇದ್ದಾಳೆ..! ಮಗನ ಉಳಿವಿಗಾಗಿ ಈ ದಂಪತಿ ದಾನಿಗಳ ಮೊರೆ ಹೋಗಿದ್ದು ತನ್ನ ಮಗನಿಗೆ ಇನ್ನು 3 ತಿಂಗಳ ಕಾಲ ಗಡುವು ನೀಡಿದ್ದಾರೆ ಎನ್ನುತ್ತಿದ್ದಾರೆ. ಅಷ್ಟರಲ್ಲಿ ಮಗನಿಗೆ ಬೇರೆ ಕಿಡ್ನಿ ಜೋಡಿಸದಿದ್ರೆ ಮಗ ಬದುಕುಳಿಯೋದೆ ಇಲ್ಲ ಎನ್ನುತ್ತಿದ್ದಾರೆ.. ಹೀಗಾಗಿ ಮಗನ ಹೆಚ್ಚಿನ ಚಿಕಿತ್ಸೆಗಾಗಿ ದಂಪತಿಗಳಿಗೆ ಹಣದ ಸಹಕಾರ ಇದ್ದು ಆಸಕ್ತ ದಾನಿಗಳು ತಮ್ಮಲ್ಲಾದ ಧನ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.. ಈಗಾಗಲೇ ಕಿಡ್ನಿ ದಾನ ಮಾಡುವವರು ಮುಂದೆ ಬಂದರೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತುಮಕೂರು ಗ್ರಾಮಂತರ ಶಾಸಕ ಬಿ. ಸುರೇಶ್ ಗೌಡ ಭರವಸೆ ನೀಡಿದ್ದಾರೆ..
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಈ ಪುಟ್ಟ ಬಾಲಕನಿಗೆ ಈಗ ನೆರವಿನ ಹಸ್ತ ತುಂಬಾ ಮುಖ್ಯವಾಗಿದೆ. ನೆರವು ನೀಡುವ ದಾನಿಗಳು ಪೋಷಕರಾದ ಎಂ.ಬಿ. ವೀರಭದ್ರಯ್ಯ ಅವರ ವಿಜಯ ಬ್ಯಾಂಕ್, ಸಿದ್ದಗಂಗಾ ಮಠ ಶಾಖೆ, ಅಕೌಂಟ್ ನಂ. 128901011000141, ಐಎಫ್‍ಎಸ್‍ಸಿ ಕೋಡ್ ವಿಐಜೆಬಿ 00011289, ಬ್ರಾಂಚ್ ಕೋಡ್ 0011289ಗೆ ಹಣ ಸಂದಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ 8762892858, 8084075076ನ್ನು ಸಂಪರ್ಕಿಸಿ.
Like us on Facebook The New India Times
POPULAR STORIES :
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!
ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!